ಸಹಕಾರ ಸೊಸೈಟಿಗಳು ದ್ವಿಚಕ್ರ ವಾಹನ, ಟ್ಯಾಕ್ಸಿ, ರಿಕ್ಷಾ ಮತ್ತು ಚತುಶ್ಚಕ್ರ ವಾಹನಗಳನ್ನು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರಿಂದ ಅನೇಕರಿಗೆ ಉದ್ಯೋಗ ಸಿಗಲಿದ್ದು ಚಾಲಕರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಓಲಾ, ಉಬರ್ ಗಳಂತಹ ಆಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಡ್ರೈವರ್ ಗಳ ಆದಾಯದ ಪಾಲು ಮಧ್ಯವರ್ತಿಗಳಿಗೆ ಹೋಗುತ್ತದೆ. ಆದರೆ ಸಹಕಾರ ಟ್ಯಾಕ್ಸಿಯಲ್ಲಿ ಹಣ ನೇರವಾಗಿ ಡ್ರೈವರ್ ಗಳಿಗೆ ಹೋಗುತ್ತದೆ. ಈ ಉಪಕ್ರಮ ಜಾರಿಗೆ ತರಲು ಮೂರುವರೆ ವರ್ಷದಿಂದ ಶ್ರಮಿಸಲಾಗಿದೆ ಎಂದು ವಿವರಿಸಿದ್ದಾರೆ.
ಓಲಾ ಮತ್ತು ಉಬರ್ಗಳು ತಾರತಮ್ಯದ ದರ ವಿಧಿಸುತ್ತಿರುವುದರ ಕುರಿತು ಇತ್ತೀಚೆಗೆ ವರದಿಯಾಗಿತ್ತು. ಐಫೋನ್ ಬಳಕೆದಾರರಿಗೆ ಒಂದು ದರವಾದರೆ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಬೇರೊಂದು ದರವಿಧಿಸಲಾಗುತ್ತಿದೆ ಎಂದು ಹೇಳಲಾಗಿತ್ತು ಈ ಕುರಿತು ಗ್ರಾಹಕರ ರಕ್ಷಣಾ ಪ್ರಾಧಿಕಾರ ಎರಡು ಕಂಪನಿಗಳಿಗೆ ನೋಟಿಸ್ ಚಾರ್ಜ್ ಮಾಡಿದೆ ಇದರ ಬೆನ್ನಲ್ಲೇ ಸಹಕಾರ ಸಚಿವರಿಂದ ಸಹಕಾರ ಟ್ಯಾಕ್ಸಿ ಎಂಬ ನೂತನ ಯೋಜನೆ ಕುರಿತು ಘೋಷಣೆಯೂ ಹೊರ ಬಿದ್ದಿದೆ.
ಸಹಕಾರ ಟ್ಯಾಕ್ಸಿ ಯೋಜನೆ ಜಾರಿಯಾದರೆ ಚಾಲಕರಿಗೆ ಹೆಚ್ಚಿನ ಆದಾಯ ಗಳಿಕೆ ಮಾತ್ರವಲ್ಲದೆ ಗ್ರಾಹಕರಿಗೆ ಕೈಗೆಟುಕು ಅದರದಲ್ಲಿ ಉತ್ತಮ ಸಾರಿಗೆ ಸೇವೆ ಕೂಡ ಸಿಗಲಿದೆ. ಈ ಯೋಜನೆ ಜಾರಿಯಿಂದ ಮುಂದಿನ ದಿನಗಳಲ್ಲಿ ದೇಶಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ಈ ಸೇವೆಗೆ ಸೇರಲು ಚಾಲಕರು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ಕಡ್ಡಾಯವಾಗಿ ಸಹಕಾರ ಟ್ಯಾಕ್ಸಿಯಲ್ಲಿ ನೋಂದಾಯಿಸಬೇಕು. ಎಂದರೆ ಇದು ಸರ್ಕಾರ ಸೇವೆಯಾಗಿರುವುದರಿಂದ ಪ್ರಯಾಣಿಕರ ಸುರಕ್ಷತೆಯೂ ಬಹು ಮುಖ್ಯವಾಗಿರುತ್ತದೆ. ವಿಮಾ ಸೇವೆಗಳನ್ನು ಒದಗಿಸುವ ಸಹಕಾರಿ ವಿಮಾ ಕಂಪನಿಗಳನ್ನು ಸಹ ಈ ಸೇವೆಗಾಗಿ ರಚಿಸಲಾಗುತ್ತದೆ ಎಂದು ಲೋಕಸಭೆಯಲ್ಲಿ ಅಮಿತ್ ಶ ಹೇಳಿದ್ದಾರೆ
.
0 Comments