ಜೈಸ್ ಸಂಸ್ಥೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ, ಸ್ಪರ್ಧಾತ್ಮಕ ಪರೀಕ್ಷಾ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರ ಸಾಧನೆಗೆ ದಾರಿದೀಪವಾಗಿರುವ ಸಂಸ್ಥೆಗಳಲ್ಲಿ ಜೈಸ್ ಸಂಸ್ಥೆ ಕೂಡ ಒಂದು. ಈ ಜೈಸ್ ಸಂಸ್ಥೆಯು ತನ್ನ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಉಚಿತ ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಿದೆ.
ಜೈಸ್ ಸಂಸ್ಥೆಯು ತನ್ನ 20ನೇ ವರ್ಷದ ಸಂಭ್ರಮಾಚರಣೆಯಲ್ಲಿ ರಾಜ್ಯ ದ ಎಲ್ಲಾ ವರ್ಗದ ಬಡ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳನ್ನು ಗುರುತಿಸಿ ಅವರಿಗೆ ಉಚಿತವಾಗಿ ತರಬೇತಿ ನೀಡಲು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳುವ ಉದ್ದೇಶದಿಂದ ಅರ್ಜಿಯನ್ನು ಆಹ್ವಾನ ಮಾಡಿದೆ. ಈ ತರಬೇತಿಯು ಐಎಎಸ್, ಕೆಎಎಸ್, ಗ್ರೂಪ್ ಸಿ ಮತ್ತು ಪಿಎಸ್ಐ, ಬ್ಯಾಂಕಿಂಗ್ ಮತ್ತು ರೈಲ್ವೆ ನೇಮಕಾತಿ ಹುದ್ದೆಗಳಿಗೆ ಕ್ರಮವಾಗಿ ಬೆಂಗಳೂರು ಕೇಂದ್ರದಲ್ಲಿ 100 ಮತ್ತು ಧಾರವಾಡ ಕೇಂದ್ರದಲ್ಲಿ 100 ವಿದ್ಯಾರ್ಥಿಗಳಂತೆ ಒಟ್ಟು 200 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದೆ.

ಅಭ್ಯರ್ಥಿಗಳು ಈ ಉಚಿತ ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ಮಾರ್ಚ್ 25 ಕೊನೆಯ ದಿನಾಂಕವಾಗಿದ್ದು, ಸಾಮಾನ್ಯ ಪರಿ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 6ರಂದು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬೆಂಗಳೂರು ಕೇಂದ್ರ 7676167901, ಧಾರವಾಡ ಕೇಂದ್ರ 9591673505 ಸಂಖ್ಯೆಗಳನ್ನು ಸಂಪರ್ಕಿಸಬಹುದು. 

ಆನ್ಲೈನ್ ಮೂಲಕ ನೋಂದಣಿಗಾಗಿ www.jiceias.com ವೆಬ್ಸೈಟ್ ಲಿಂಕನ್ನು ಬಳಸಬಹುದಾಗಿದೆ.


Post a Comment

0 Comments