ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ ಕಲ್ಕತ್ತಾ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿಯಾಗಿದ್ದ ಜಾಯ್ ಮಾಲ್ಯ ಬಾಗ್ಚಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಬಾಗ್ಚಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ಸುಪ್ರೀಂ ಕೋರ್ಟಿನಲ್ಲಿ ಒಟ್ಟು 34 ನ್ಯಾಯಮೂರ್ತಿಗಳ ಹುದ್ದೆಗಳಿದ್ದು ಪ್ರಸ್ತುತ 33 ಹುದ್ದೆಗಳು ಭರ್ತಿಯಾಗಿದೆ. 33ನೇ ಹುದ್ದೆಗೆ ನ್ಯಾಯಮೂರ್ತಿಯಾಗಿ ಬಾಗ್ಚಿ ನೇಮಕವಾಗಿದ್ದಾರೆ. ಇನ್ನು ಒಂದು ನ್ಯಾಯಮೂರ್ತಿಯ ಸ್ಥಾನ ಖಾಲಿ ಇದೆ.
0 Comments