ರೆಸಾರ್ಟ್, ಹೋಂ ಸ್ಟೇ ನೋಂದಣಿ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಈಗ ಹೋಂ ಸ್ಟೇ, ರೆಸಾರ್ಟ್ಗಳು ಅಣಬೆಯಂತೆ ಮೆರೆಯುತ್ತಿವೆ. ಕೆಲವು ಕಾನೂನಾತ್ಮಕವಾಗಿ ಪರವಾನಗಿ ಪಡೆದುಕೊಂಡಿದ್ದರೆ ಇನ್ನೂ ಕೆಲವರು ಅಕ್ರಮವಾಗಿ ಕಟ್ಟಿಸಿದ್ದು, ಇಂತಹ ಎಲ್ಲಾ ಹೋಂ ಸ್ಟೇ, ರೆಸಾರ್ಟ್ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಮಂಗಳೂರು ಪೋಲೀಸ್ ಆಯುಕ್ತರಾಗಿರುವ ಅನುಪಮ್ ಅಗರವಾಲ್ ಸೂಚನೆ ನೀಡಿದ್ದಾರೆ.
ಮಾರ್ಚ್ 19ನೇ ಬುಧವಾರ ಪೋಲೀಸ್ ಆಯುಕ್ತರ‌ ಕಚೇರಿಯಲ್ಲಿ ಹೋಂ ಸ್ಟೇ, ರೆಸಾರ್ಟ್ ಮಾಲಕರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಗರ್ವಾಲ್ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ನಗರದ ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ವಿವಿಧ ಪ್ರವಾಸಿ ತಾಣಗಳಲ್ಲಿ ನಡೆಸುತ್ತಿರುವ ಹೋಂ ಸ್ಟೇ ಅಥವಾ ರೆಸಾರ್ಟ್ ಗಳಿಗೆ ಬರುವಂತಹ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗಳಿಗೆ ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಸಭೆಯಲ್ಲಿ ಸುಮಾರು 118 ರೆಸಾರ್ಟ್, ಹೋಂ ಸ್ಟೇ ಮಾಲಕರು, ಅಬಕಾರಿ ಪ್ರವಾಸೋದ್ಯಮ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.


Post a Comment

0 Comments