ಯಾವುದೇ ಸೇವಾನುಭವ ಇಲ್ಲದ 28 ವರ್ಷದೊಳಗಿನ ಯುವ ಉತ್ಸಾಹಿ ಅಭ್ಯರ್ಥಿಗಳಿಂದ ಡೆಪ್ಯುಟಿ ಎಂಜಿನಿಯರಿಂಗ್ ಹುದ್ದೆಗಳಿಗೆ ಬಿಇಎಲ್ ಅರ್ಜಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 20 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಆಯಾ ವಿಭಾಗದಲ್ಲಿ ಬಿಇ/ಬಿ.ಟೆಕ್ ಅಥವಾ ಬಿಎಸ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಈ ಹುದ್ದೆಗೆ ತಿಂಗಳಿಗೆ 40,000 ದಿಂದ ರೂ.1,40,000 ರೂ ತನಕ ವೇತನ ನಿಗದಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಐಟಿಐ, ಡಿಪ್ಲೋಮಾ ಆದವರಿಗೂ ಉದ್ಯೋಗಾವಕಾಶ:
ಇಂಜಿನಿಯರಿಂಗ್ ಅಸಿಸ್ಟೆಂಟ್, ಟೆಕ್ನಿಷಿಯನ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು ಸೇರಿ ಒಟ್ಟು 32 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿರುವ ಬಿಇಎಲ್ ಏಪ್ರಿಲ್ 9ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ ವಿಭಾಗದಲ್ಲಿ
ಡಿಪ್ಲೋಮೋ ಪೂರ್ಣಗೊಳಿಸಿದವರು ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬಿಕಾಂ ಅಥವಾ ಬಿಬಿಎಂ ಪದವೀಧರರು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಹಾಗೂ ಎಲೆಕ್ಟ್ರಾನಿಕ್ ಅಥವಾ ಮೆಕ್ಯಾನಿಕ್ ನಲ್ಲಿ ಐಟಿಐ ಅರ್ಹತೆಯುಳ್ಳವರು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಇರಬೇಕು.
ಬೋಧಕ-ಬೋಧಕೇತರ ವಿಭಾಗ:
ಬಿ ಇ ಎಲ್ ಎಜುಕೇಶನಲ್ ಇನ್ಸ್ಟಿಟ್ಯೂಷನ್ ನಲ್ಲಿ ಬೋಧಕರು ಮತ್ತು ಬೋಧಕೇತರ ಹುದ್ದೆಗಳು ಸೇರಿ ಒಟ್ಟು 57 ಹುದ್ದೆಗಳು ಖಾಲಿ ಇವೆ ಆಸಕ್ತ 45 ವರ್ಷದೊಳಗಿನ ಅಭ್ಯರ್ಥಿಗಳು ಏಪ್ರಿಲ್ 1ರೊಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಸ್ಪೆಷಲ್ ಎಜುಕೇಟರ್, ಯೋಗ ಟೀಚರ್, ವಿವಿಧ ವಿಷಯಗಳಿಗೆ ಪಿಆರ್‌ಟಿ, ಟಿಜಿಪಿ, ಡ್ಯಾನ್ಸ್ ಟೀಚರ್, ಕೌನ್ಸಿಲರ್, ಫಿಸಿಕಲ್ ಎಜುಕೇಶನ್ ಟೀಚರ್, ಲೈಬ್ರರಿಯನ್, ಜಿಪಿಟಿ, ಮ್ಯೂಸಿಕ್ ಟೀಚರ್, ಲ್ಯಾಬ್ ಅಸಿಸ್ಟೆಂಟ್ ಮತ್ತು ಅಕೌಂಟೆಂಟ್ ಹುದ್ದೆಗಳಿವೆ.
ಆಯಾ ಹುದ್ದೆಗಳಿಗನುಸಾರ ವಿದ್ಯಾರ್ಹತೆ ಬೇರೆ ಬೇರೆಯಾಗಿದೆ. ಪಿಯುಸಿ, ಬಿ ಎ, ಬಿಎಸ್ಸಿ, ಡಿಪ್ಲೋಮಾ, ಬಿ ಎಡ್, ಎಂಎ, ಎಂಎಸ್ಸಿ, ಬಿಕಾಂ ಸೇರಿದಂತೆ ಬೇರೆ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿದ್ದರೂ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ: The Secretary, BEEI-BEL High school Building, Jalahalli post, Bengalore-560013.
ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳಿಗೆ ಮಾಜಿ ಸೈನಿಕರಿಂದ ಮಾರ್ಚ್ 31ರ ಒಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು ಸೇರಿದಂತೆ ವಿವಿದೆಡೆ ನೇಮಕ ಪ್ರಕ್ರಿಯೆಗಳು ನಡೆಯಲಿದ್ದು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ https://bel.india.in ವೆಬ್ಸೈಟ್ ಅನ್ನು ಗಮನಿಸಬಹುದು.
0 Comments