ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ!!

ಕೇಂದ್ರ ಸರ್ಕಾರ ನೌಕರರ ತುಟಿ ಭತ್ಯೆ (ಡಿಎ) ಹಾಗೂ ಪಿಂಚಣಿ ದಾರರಿಗೆ ತುಟ್ಟಿ ಪರಿಹಾರ(ಡಿಆರ್)ವನ್ನು ಮೂಲವೇತನದ ಶೇಕಡ ಎರಡರಷ್ಟನ್ನು ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ 1.15 ಕೋಟಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಪ್ರಸ್ತುತ ಮೂಲವೇತನದ ಶೇಕಡ 53ರಷ್ಟು ಡಿಎ ಮತ್ತು ಡಿಆರ್ ಇದ್ದು, ಇದು ಶೇಕಡ 55ಕ್ಕೆ ಹೆಚ್ಚಳವಾಗಲಿದೆ. ಈ ನಿಯಮ ಜನವರಿ 1 ರಿಂದ ಪೂರ್ವಾನ್ವಯವಾಗಲಿದೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್, ತುಟಿ ಭತ್ಯೆ ಮತ್ತು ತುಟಿ ಪರಿಹಾರ ಏರಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಇದಕ್ಕಾಗಿ ಸರಕಾರವು 6,614 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 48.66 ಲಕ್ಷ ನೌಕರರು ಮತ್ತು 66.55 ಲಕ್ಷ‌ ಪಿಂಚಣಿದಾರರು ಇದ್ದಾರೆ.

Post a Comment

0 Comments