ಸಿಎಸ್ಕೆ ವಿರುದ್ಧ 50 ರನ್ಗಳ ಅಮೋಘ ಗೆಲುವು ಸಾಧಿಸಿದ ಆರ್ಸಿಬಿ!!

ನಿನ್ನೆ ಚೆಪಾಕ್ ಎಂದೇ ಖ್ಯಾತಿಯಾಗಿರುವ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಬರೋಬ್ಬರಿ 17 ವರ್ಷಗಳ ನಂತರ ಆರ್ಸಿಬಿ ತಂಡವು ಭರ್ಜರಿ ಗೆಲುವು ದಾಖಲಿಸಿದೆ. 2008ರ ನಂತರ ಇದೇ ಮೊದಲ ಬಾರಿಗೆ ಆತಿಥೇಯ ಸಿಎಸ್‌ಕೆ ತಂಡವನ್ನು ಅದರದ್ದೇ ತವರು ಕ್ರೀಡಾಂಗಣದಲ್ಲಿ ಆರ್‌ಸಿಬಿ ಮಣಿಸಿದ್ದು, 50 ರನ್ಗಳ ಅಮೋಘ ಜಯವನ್ನು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಗೆಲುವಿನ ನಿರೀಕ್ಷೆಯಲ್ಲಿದ್ದರು‌. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ರಜತ್ ಪಾಟೀಲ್ ಅವರ ಆಕರ್ಷಕ 51 ರನ್ ಗಳು ಮತ್ತು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಹೇಳು ವಿಕೆಟ್ ಕಳೆದುಕೊಂಡು 196 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಫಿಲ್ಸ್ 32 ರನ್ನು ವಿರಾಟ್ ಕೊಹ್ಲಿ 31 ದೇವದ ಪಡಿಕಲ್ 27 ರನ್ಗಳೊಂದಿಗೆ ತಂಡಕ್ಕೆ ಅತ್ಯುತ್ತಮ ಆರಂಭವನ್ನು ಒದಗಿಸಿದರು. ಕೊನೆಯ ಓವರ್ ನಲ್ಲಿ ಟೀಮ್ ಡೇವಿಡ್ ಹೊಡೆದ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 22 ರನ್ ಗಳು ಮೊತ್ತವನ್ನು ದೊಡ್ಡದಾಗಿಸುವಲ್ಲಿ ನಿರ್ಣಾಯಕವಾದವು. ಆರಂಭದಿಂದಲೇ ಎಡವಿದ ಸಿಎಸ್‌ಕೆ ತಂಡವು 146 ರನ್ಗಳಿಗೆ ಆಲ್ ಔಟ್ ಆಗಿ 50 ರನ್ಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿತು.

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪಾಲಿಗೆ ಇದು ಎರಡನೇ ಗೆಲುವು ಆಗಿದೆ. ಚೆಪಾಕ್ ನಲ್ಲಿ ಹಳದಿ ಸೈನ್ಯವನ್ನು ಹಿಮ್ಮೆಟ್ಟಿದ ಆರ್‌ಸಿಬಿ ತಂಡದ ಗೆಲುವನ್ನು ಅಭಿಮಾನಿಗಳೆಲ್ಲರೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Post a Comment

0 Comments