ನರೇಂದ್ರ ಮೋದಿಯವರ ಮೊದಲ ಖಾಸಗಿ ಪಾಡ್ ಕಾಸ್ಟ್: ಮೋದಿಯವರ ಸಂದರ್ಶನ ನಡೆಸಿದ ಲೆಕ್ಸ್ ಫ್ರಿಡ್ಮನ್!!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ವಿದೇಶಿ ಖಾಸಗಿ ಮಾಧ್ಯಮ ಒಂದಕ್ಕೆ ಪಾಡ್ಮೂ ಕ್ಯಾಸ್ಟ್ ನೀಡಿದ್ದಾರೆ. ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಯುಎಸ್ ಮೂಲದ ಲೆಕ್ಸ್ ಫ್ರಿಡ್ಮನ್ ಅವರು ಸಂದರ್ಶನ ಮಾಡಿದ್ದಾರೆ. 
ಲೆಕ್ಸ್ ಫ್ರಿಡ್ಮನ್ ಅವರು ತಮ್ಮ ಯೂಟ್ಯೂಬ್ ನಲ್ಲಿ ಮೋದಿಯವರನ್ನು ನಡೆಸಿದ ಪಾಡ್ ಕ್ಯಾಸ್ಟ್ ಅನ್ನು ಅಪ್ಲೋಡ್ ಮಾಡಿದ್ದರು, ಈ ಸಂದರ್ಶನ ಸುಮಾರು 3 ಗಂಟೆ, 17 ನಿಮಿಷಗಳಷ್ಟು ಸುದೀರ್ಘವಾಗಿದೆ. ಈ ಸಂದರ್ಶನದುದ್ದಕ್ಕೂ ಮೋದಿಯವರು ತಮ್ಮ ಬಾಲ್ಯ, ಆರ್.ಎಸ್.ಎಸ್ ಮೌಲ್ಯ, ರಾಜಕೀಯ ಜೀವನ ಹೀಗೇ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿಯವರ ಬಾಲ್ಯ ಜೀವನದಿಂದ ಹೋರಾಟದ ದಿನಗಳವರೆಗೆ ಮತ್ತು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ದೇಶದ ಅತ್ಯುನ್ನತ ಪ್ರಧಾನ ಮಂತ್ರಿ ಹುದ್ದೆಯವರೆಗಿನ ಸುದೀರ್ಘ ಪಯಣದ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೇಶದ 140 ಕೋಟಿ ಭಾರತೀಯರನ್ನು ತನ್ನ ಶಕ್ತಿ ಎಂದೇ ಬಣ್ಣಿಸಿರುವ ಮೋದಿ ಮಾತಿನುದ್ದಕ್ಕೂ ರಾಷ್ಟ್ರ ಭಾಷೆ ಹಿಂದಿಯಲ್ಲೇ ಮಾತನಾಡಿದರು. ಫ್ರಿಡ್ಮನ್ ಅವರು ಈ ಪಾಡ್ ಕಾಸ್ಟ್ ಅನ್ನು  ಮಹಾಕಾವ್ಯದ ಸಂಭಾಷಣೆ ಹಾಗೂ ತನ್ನ ಜೀವನದ ಅತ್ಯಂತ ಶಕ್ತಿಶಾಲಿ ಸಂದರ್ಶನ ಎಂದು ಹೇಳಿದ್ದಾರೆ. ಆದರೆ ಮೋದಿಯವರು ಈ ಪಾಡ್ ಕಾಸ್ಟ್ ಅನ್ನು 'ಆಕರ್ಷಕ ಸಂಭಾಷಣೆ' ಎಂದು ಬಣ್ಣಿಸಿದರು. ಎಲ್ಲರೂ ಈ ಪಾಡ್ ಕಾಸ್ಟ್ ವೀಕ್ಷಣೆ ಮಾಡುವ ಮೂಲಕ ಅದರ ಭಾಗವಾಗಿ ಎಂದು ಪ್ರಧಾನಿ ಹೇಳಿದ್ದಾರೆ.







Post a Comment

0 Comments