ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂಭ್ರಮ

ಹತ್ತೂರ ಒಡೆಯ, ಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂಭ್ರಮಕ್ಕೆ ದಿನಗಣನೆ ಬಾಕಿಯಿದ್ದು, ಅದ್ಧೂರಿ ಸಿದ್ಧತೆಗಳು ನಡೆಯುತ್ತಿವೆ. ಪುತ್ತೂರು ಜಾತ್ರೆಯೆಂದರೆ 
ಹತ್ತೂರಿಗೂ ಸಂಭ್ರಮ. ಸಹಸ್ರಾರು ಭಕ್ತರು ಸಾಗರೋಪಾದಿಯಲ್ಲಿ ಸೇರಿ ಧ್ವಜಾರೋಹಣ, ಮಹಾ ದರ್ಶನ ಬಲಿ, ಮಹಾ ರಥೋತ್ಸವವನ್ನು ಭಕ್ತಿಯಿಂದ ಕಣ್ತುಂಬಿಕೊಂಡು ಪುಳಕಿತರಾಗುತ್ತಾರೆ.
ಜಾತ್ರಾ ಮಹೋತ್ಸವದ ಪ್ರತೀ ದಿನದ ಕಾರ್ಯಕ್ರಮಗಳು ಈ ಕೆಳಗಿನಂತಿವೆ.

01.04.2025 ಮಂಗಳವಾರ 
ಬೆಳಿಗ್ಗೆ ಪ್ರಾರ್ಥನೆ, ಗಂಟೆ 9-30 ನಂತರ ವೃಷಭ ಲಗ್ನದಲ್ಲಿ ಗೊನೆ ಕಡಿಯುವುದು. ಕೊಟ್ಟಿಬೆಟ್ಟು ಏಳ್ನಾಡುಗುತ್ತುವರಿಂದ ಅನ್ನಸಂತರ್ಪಣೆ

10.04.2025 ಗುರುವಾರ 
 ಬೆಳಿಗ್ಗೆ ಗಂಟೆ 9-25ರ ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ ಕುರಿಯ ಏಳ್ನಾಡುಗುತ್ತುವರಿಂದ ಅನ್ನಸಂತರ್ಪಣೆ.
ಸಂಜೆ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು , ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ , ಕಲ್ಲೆಗ , ಕರ್ಮಲ ಸವಾರಿ

11.04.2025 ಶುಕ್ರವಾರ 
 ಸಂಜೆ ಉತ್ಸವ, ನೆಲ್ಲಿಕಟ್ಟೆ, ಸಾಲ್ಮರ ಸೂತ್ರಬೆಟ್ಟು ಸವಾರಿ

 12.04.2025 ಶನಿವಾರ 
ಸಂಜೆ ಉತ್ಸವ, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು, ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ ರಾಧಾಕೃಷ್ಣ ಮಂದಿರ ಸವಾರಿ

13.04.2025 ಆದಿತ್ಯವಾರ 
ಸಂಜೆ ಉತ್ಸವ,ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೋಳುವಾರು ಬೈಲ್ ಸವಾರಿ 

14.04.2025 ಸೋಮವಾರ 
ಸೌರಮಾನ ಯುಗಾದಿ (ವಿಷು) ಬೆಳಗ್ಗೆ ಉತ್ಸವ ಶ್ರೀ ದೇವರ ಬಲಿ, ವಸಂತಕಟ್ಟೆ ಪೂಜೆ 
ಸಂಜೆ ಉತ್ಸವ, ರಾತ್ರಿ ಬಂಡಿ ಉತ್ಸವ
ಕೊಂಬೆಟ್ಟು, ಬೋಳುವಾರು,ಹಾರಾಡಿ ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಸವಾರಿ

15.04.2025 ಮಂಗಳವಾರ 
ಸಂಜೆ ಉತ್ಸವ
ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ ಸವಾರಿ

16.04.2024 ಬುಧವಾರ 
ಬೆಳಿಗ್ಗೆ 8.30 ರಿಂದ ತುಲಾಭಾರ 
ಸಂಜೆ ಉತ್ಸವ, ಶ್ರೀ ಮಹಾಲಿಂಗೇಶ್ವರ ಹಾಗು ಶ್ರಿ ದಂಡನಾಯಕ ಉಳ್ಳಾಳ್ತಿ ಭೇಟಿ ,ಪಾಲಕಿ ಉತ್ಸವ, ಸಣ್ಣ ರಥೋತ್ಸವ 
ಕೆರೆ ಅಯನ ತೆಪ್ಪೋತ್ಸವ

17.04.2025 ಗುರುವಾರ 
 ಬೆಳಗ್ಗೆ ವಸಂತಕಟ್ಟೆ ಪೂಜೆ, ದರ್ಶನ ಬಲಿ, ರಾತ್ರಿ ವೈಭವದ *ಬ್ರಹ್ಮರಥೋತ್ಸವ*, *ಪುತ್ತೂರು ಬೆಡಿ* 
ಬಂಗಾರ್ ಕಾಯರ್ ಕಟ್ಟೆ ಸವಾರಿ, *ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ* ಶ್ರೀ ಭೂತಬಲಿ, ಶಯನ

18.04.2025 ಶುಕ್ರವಾರ 
ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, 8.30 ತುಲಾಭಾರ ಸೇವೆ
ಉತ್ಸವ, ಸಂಜೆ *ವೀರಮಂಗಿಲ ಅವಭೃತ ಸ್ನಾನಕ್ಕೆ ಸವಾರಿ* 

19.04.2025 ಶನಿವಾರ 
*ಧ್ವಜಾವರೋಹಣ* 
ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, *ಎಳ್ನಾಡ್ ದೈವ ಪಿಲಿ ಭೂತ , ರಕ್ತೇಶ್ವರಿ ನೇಮ*

20.04.2025 ಆದಿತ್ಯವಾರ 
 ಸಂಪ್ರೋಕ್ಷಣೆ
ರಾತ್ರಿ ಮಂತ್ರಾಕ್ಷತೆ, *ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ*

ನಿಮಗಿದೊ ಆತ್ಮೀಯ ಕರೆಯೋಲೆ ಪ್ರೀಯ ಬಂಧು-ಮಿತ್ರರೇ.
*ಶ್ರೀ ಮಹಾಲಿಂಗೇಶ್ವರಾಯ ನಮಃ*
*ॐ नमः शिवाय*
*ಓಂ ನಮಃ ಶಿವಾಯ*
*Om Namha Shivaya*
 - ಚಂದ್ರ ಕಜೆ

Post a Comment

0 Comments