ಪ್ರಸ್ತುತ ಭಾರತದಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಖರ್ಚು ಯಥೇಚ್ಛವಾಗಿದೆ. ಈ ಸದಶಿ ನಿರ್ಮಿತ ಸ್ಕ್ಯಾನರ್ ಬಳಕೆಯಿಂದ ಎಂ ಆರ್ ಐ ತಪಾಸಣೆಗಳ ಖರ್ಚು ಗಣನೀಯವಾಗಿ ಇಳಿಯಲಿದೆ. ಇಂತಹ ಸ್ವದೇಶಿ ಯಂತ್ರಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಇಂತಹ ಯಂತ್ರಗಳಿಗೆ ವಿದೇಶಗಳ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತದೆ ಎಂದು ಏನು ನಿರ್ದೇಶಕ ಡಾಕ್ಟರ್ ಎಂ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ಎಂ ಆರ್ ಐ ಸೇರಿದಂತೆ ಐಸಿಯು ಹಾಗೂ ರೋಬೋಟಿಕ್ ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದಲೇ ತರಿಸಲಾಗುತ್ತಿದೆ. ದೇಶಿಯವಾಗಿ ಎಂ.ಆರ್.ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿರುವುದು ಆತ್ಮ ನಿರ್ಭರ ಭಾರತ ಪರಿಕಲ್ಪನೆಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
0 Comments