ಅಮೆರಿಕದಂತಹ ಪ್ರಮುಖ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬೇಡಿಕೆ ಪಡೆಯುತ್ತಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಭಾನುವಾರ ತಿಳಿಸಿದೆ.
ಭಾರತದಲ್ಲಿ ಈಗ ಸಾಂಪ್ರದಾಯಿಕ ಗೋಲಿ ಸೋಡಾ ಕಾಣಿಸುವುದು ತುಂಬಾ ಅಪರೂಪ. ಆದರೆ ಲುಲು ಹೈಪರ್ಮಾರ್ಕೆಟ್ ಗಲ್ಫ್ ಪ್ರಾಂತ್ಯದ ದೊಡ್ಡ ಚಿಲ್ಲರೆ ಮಾರಾಟಗಾರರಲ್ಲಿ ಒಂದಾಗಿದ್ದು, ಗೋಲಿ ಪಾಪ್ ಸೋಡಾ ರೀಬ್ರಾಂಡ್ ನಡಿಯಲ್ಲಿ ಭಾರತ ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ. ಒಂದು ಕಾಲದಲ್ಲಿ ಮನೆಯ ಪ್ರಮುಖ ಪಾನಿಯವಾಗಿದ್ದ ಗೋಲಿ ಸೋಡಾ, ಮಾರಾಟದ ವಿಸ್ತರಣೆ ಮತ್ತು ಹೊಸ ಆವಿಷ್ಕರಣೆಯಿಂದ ಜಾಗತಿಕ ಮಟ್ಟಕ್ಕೆ ಬೆಳೆದಿದೆ. ಅಮೆರಿಕ ಬ್ರಿಟನ್ ಐರೋಪ್ಯ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಈಗಾಗಲೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ ಎಂದು ತಿಳಿಸಿದೆ. ಬಹು ರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದ ಬಹುತೇಕ ಕಣ್ಮರೆಯಾಗುತ್ತಿದ್ದ ಗೋಲಿ ಸೋಡಾ ಸರಕಾರದ ಉತ್ತೇಜನ ಮತ್ತು ರಫ್ತಿಯಿಂದ ಗೋಲಿ ಸೋಡಾ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಮತ್ತು ಪಾನೀಯ ಉತ್ಪನ್ನಗಳು ಮಹತ್ವದ ಸ್ಥಾನ ಪಡೆದಿದೆ ಎಂದು ತಿಳಿಸಿದೆ.
0 Comments