ಈ ಕಂಪನಿಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು ಅವುಗಳ ವಿವರ, ವೇತನದ ಬಗ್ಗೆ ಮಾಹಿತಿ ಇಲ್ಲಿದೆ.
1.ಟೀಮ್ ಲೀಡರ್ (ಸೇಫ್ಟಿ):1 ಹುದ್ದೆ, ವೇತನ:70,000-2,00,000ರೂ.
2. ಟೀಮ್ ಲೀಡರ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಫ್ಲಂಬಿಂಗ್): 2 ಹುದ್ದೆ , ವೇತನ:70,000-2,00,000ರೂ.
3. ಪ್ರಾಜೆಕ್ಟ್ ಇಂಜಿನಿಯರ್(ಎಂಇಪಿ):12 ಹುದ್ದೆ, ವೇತನ:50,000-1,60,000ರೂ.
4. ಸೇಫ್ಟಿ ಇಂಜಿನಿಯರ್:2 ಹುದ್ದೆ , ವೇತನ: 40,000-1,40,000ರೂ.
5. ಜೂನಿಯರ್ ಇಂಜಿನಿಯರ್: 17 ಹುದ್ದೆಗಳು, ವೇತನ: 18,940-46,417ರೂ.
6. ವೈಯಕ್ತಿಕ ಸಲಹೆಗಾರ ರೆಸಿಡೆಂಟ್ ಇಂಜಿನಿಯರ್ (ಸಿವಿಲ್):1 ಹುದ್ದೆ, ವೇತನ: 80,000-1,25,000ರೂ.
7. ಪ್ಲಾನಿಂಗ್ ಇಂಜಿನಿಯರ್: 1 ಹುದ್ದೆ, ವೇತನ: 80,000-1,25,000ರೂ.
8. ಕ್ವಾಲಿಟಿ ಕಂಟ್ರೋಲ್ /ಮೆಟಿರಿಯಲ್ ಇಂಜಿನಿಯರ್ (ಸಿವಿಲ್):1, ವೇತನ: 80,000-1,25,000ರೂ.
9. ಸೇಫ್ಟಿ ಹೆಲ್ತ್ ಅಂಡ್ ಎನ್ವಿರಾನ್ಮೆಂಟ್ ಎಕ್ಸ್ಪರ್ಟ್:2 ಹುದ್ದೆ , ವೇತನ: 80,000-1,25,000ರೂ.
10. ಪ್ಲಾನಿಂಗ್ ಅಂಡ್ ಶೆಡ್ಯೂಲಿಂಗ್ ಎಕ್ಸ್ಪರ್ಟ್: 1 ಹುದ್ದೆ, ವೇತನ: 80,000-1,25,000ರೂ.
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಗಳಿಂದ ಡಿಪ್ಲೋಮಾ, ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಂಎ, ಎಂಎಸ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕೆಲಸದ ಅನುಭವ ಹೊಂದಿರಬೇಕು.
ರೈಟ್ ಲಿಮಿಟೆಡ್ ನ ನಿಯಮಾನುಸಾರ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಹುದ್ದೆಗೆ ಅನುಗುಣವಾಗಿ 55 ರಿಂದ 63 ವರ್ಷದೊಳಗಿರಬೇಕು. ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ 10-15 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡುವ ಮೂಲಕ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳದ ಬಗ್ಗೆ ಮಾಹಿತಿ:
ವೈಯಕ್ತಿಕ ಸಲಹೆಗಾರ ಹುದ್ದೆಗೆ ಮಾರ್ಚ್ 26 ರಿಂದ ಮಾರ್ಚ್ 28 ರ ವರೆಗೆ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ವಿಳಾಸ: Industry House, 5th floor, 45, Fairfield layout, Race course road, Bengaluru- 560001
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/3/2025.
ಬಾಕಿ ಉಳಿದಿರುವ ಹುದ್ದೆಗಳಿಗೆ ಏಪ್ರಿಲ್ 21ರಿಂದ 25ರವರೆಗೆ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳಗಳು:
RITES Limited, Shikhar, Plot No.1, Sector-29, near IFFCO Chowk Metro Station, Gurugram- 122001, Haryana
RITES LTD, ground floor, Calsar Heather Punnen Road, Opposite Hilton Hotel, Statue Thiruvananthapuram-695001
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24.3.2025
ಹೆಚ್ಚಿನ ಮಾಹಿತಿ ಮತ್ತು ಅಧಿಸೂಚನೆಗಾಗಿ www.rites.com/Career ಪರಿಶೀಲಿಸಬಹುದಾಗಿದೆ.
0 Comments