ಜನ ಸಚಿವಾಲಯವು ಯುವ ಪ್ರತಿಭಾವಂತ ಲೇಖಕರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಯುವ ಯೋಜನೆಯ ಮೂರನೇ ಆವೃತ್ತಿಯನ್ನು ಪ್ರಾರಂಭಿಸಿದೆ ಇದು ಭಾರತದಲ್ಲಿ 30 ವರ್ಷದೊಳಗಿನ ಯುವ ಲೇಖಕರಿಗೆ ತರಬೇತಿ ನೀಡುವ ಗುರಿಯೊಂದಿಗೆ ಭಾರತದಲ್ಲಿ ಓದುವುದು ಬರೆಯುವುದು ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.
ಈ ಸ್ಪರ್ಧೆಯು ಮಾರ್ಚ್ 11 ರಿಂದ ಆರಂಭವಾಗಿ ಎಪ್ರಿಲ್ 10, 2025ರ ವರಗೆ ನಡೆಯಲಿದೆ. ಈ ಸ್ಪರ್ಧೆಗೆ 30 ವರ್ಷದೊಳಗಿನ ಯುವ ಬರಹಗಾರರು ಅರ್ಹರಾಗಿದ್ದು ಒಟ್ಟು 50 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಲೇಖಕರಿಗೆ ವಿದ್ಯಾರ್ಥಿವೇತನದಂತೆ ಪ್ರತಿ ತಿಂಗಳು 50,000 ಯಂತೆ ಆರು ತಿಂಗಳು ನೀಡಲಾಗುವುದು. ಮೀರಿದ ವಿಷಯದಲ್ಲಿ ಮಾಹಿತಿಗಳನ್ನು 22 ಅಧಿಕೃತ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಲ್ಲಿಸಲು ಲೇಖಕರಿಗೆ ಅವಕಾಶವಿದೆ.
ಸ್ಪರ್ಧೆಗೆ ಮೂರು ವಿಷಯಗಳನ್ನು ನೀಡಲಾಗಿದ್ದು ಲೇಖನ ಬರೆಯುವ ವಿಷಯಗಳು ಈ ಕೆಳಗಿನಂತಿವೆ.
1. ರಾಷ್ಟ್ರ ನಿರ್ಮಾಣದಲ್ಲಿ ವಿದೇಶಿ ಭಾರತೀಯ ಕೊಡುಗೆ
ಈ ಮೇಲಿನ ವಿಷಯದ ಕುರಿತು ಲೇಖನಗಳನ್ನು ಬರೆಯಲು ಅವಕಾಶ ನೀಡಲಾಗಿದ್ದು, ಅಂತಿಮವಾಗಿ 10 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ.
2. ಭಾರತೀಯ ಜ್ಞಾನ ವ್ಯವಸ್ಥೆ
ಈ ವಿಷಯದ ಕುರಿತು ಲೇಖನ ಬರೆದ ಬರಹಗಾರರಲ್ಲಿ ಅಂತಿಮವಾಗಿ 20 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ.
3. ಆಧುನಿಕ ಭಾರತದ ನಿರ್ಮಾತೃಗಳು(1950-2025)
ಈ ವಿಷಯದ ಕುರಿತು ಲೇಖನ ಬರೆದವರಲ್ಲಿ ಒಟ್ಟು 20 ಲೇಖಕರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಬರಹಗಾರರು ತಮ್ಮ ಲೇಖನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 10 2025 ಆಗಿರುತ್ತದೆ. ಮಾಹಿತಿಗಳನ್ನು ಪಡೆಯಲು ಮತ್ತು ಲೇಖನಗಳನ್ನು ಸಲ್ಲಿಸಲು https://innovateindia.mygov.in/yuva/ ವೆಬ್ಸೈಟ್ ಲಿಂಕಿಗೆ ಭೇಟಿ ನೀಡಿ ಪರಿಶೀಲಿಸಬಹುದು.
0 Comments