ಸರಕಾರಿ ಉದ್ಯೋಗ ಮಾಹಿತಿಗಳನ್ನು ಸುಲಭವಾಗಿ ಒಂದೇ ಸೂರಿನಡಿ ಪಡೆಯಲು ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ರೂಪಿಸುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಸುಲಭವಾಗಿ ಬೇಗನೆ ಅರ್ಜಿ ಸಲ್ಲಿಸಲು ಯೋಜನೆ ಬಹು ಉಪಯೋಗವಾಗಲಿದೆ. ಉದ್ಯೋಗಕ್ಕಾಗಿ ಆಲವೇದಿಕೆಗಳಲ್ಲಿ ಅರ್ಜಿ ಸಲ್ಲಿಸಲು ಪರದಾಡುವ ಯುವಜನರ ಕಷ್ಟಗಳನ್ನು ಕಡಿಮೆ ಮಾಡಲು ಕೇಂದ್ರ ಸರಕಾರವು ಮುಂದಾಗಿದ್ದು ಎಲ್ಲಾ ಹುದ್ದೆಗಳ ಮಾಹಿತಿಗಳನ್ನು ಒಂದೇ ಕಡೆ ನೀಡಿ ಅರ್ಜಿ ಸಲ್ಲಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ "ಏಕ ಉದ್ಯೋಗ ಅರ್ಜಿ ಪೋರ್ಟಲ್" ಅನ್ನು ರೂಪಿಸಲು ನಿರ್ಧರಿಸಿದೆ.
ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಡಾಕ್ಟರ್ ಜಿತೇಂದ್ರ ಪ್ರಸಾದ್ ಸಿಂಗ್ ಅವರು ಉದ್ಯೋಗ ಅರ್ಜಿ ಪೋರ್ಟಲ್ ರಚನೆಗೆ ಸೂಚನೆ ನೀಡಿದ್ದಾರೆ. 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸುತ್ತಿರುವ ಇಲಾಖೆಯು ಇದೀಗ ನೇಮಕ ಪ್ರಕ್ರಿಯೆ ಅವಧಿಯನ್ನು 15 ತಿಂಗಳಿನಿಂದ ಎಂಟು ತಿಂಗಳಿಗೆ ಇಳಿಕೆ ಮಾಡಿದೆ.
0 Comments