ಅಧಿಕೃತ ವೆಬ್ಸೈಟ್ neet.nta.nic.in ಗೆ ಭೇಟಿ ನೀಡಿ ಮುಖಪುಟದಲ್ಲಿ ನೊಂದಣಿ ಲಿಂಕನ್ನು ಆಯ್ಕೆ ಮಾಡಬೇಕು. ನಂತರ ಅಭ್ಯರ್ಥಿಗಳು ತಮ್ಮ ಹೆಸರು, ಸಂಪರ್ಕ ಸೇರಿದಂತೆ ಮೂಲ ವಿವರಗಳನ್ನು ನಮೂದಿಸಿ ಖಾಲಿ ಹಾಳೆಯಲ್ಲಿ ಸಹಿ ಹಾಕಿ ಅಪ್ಲೋಡ್ ಮಾಡಿ ಶುಲ್ಕ ಪಾವತಿಸಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 1700 ರೂಪಾಯಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 1600 ರೂಪಾಯಿ, ಎಸ್.ಸಿ, ಎಸ್.ಟಿ, ಪ್ರವರ್ಗ ಅಭ್ಯರ್ಥಿಗಳಿಗೆ ರೂ.1000, ವಿದೇಶಿ ಅಭ್ಯರ್ಥಿಗಳಿಗೆ 9500 ರೂ ಶುಲ್ಕ ನಿಗದಿಪಡಿಸಲಾಗಿದೆ.
ಆನ್ಲೈನ್ ಅರ್ಜಿ ಸಲ್ಲಿಕೆಗೆ ಫೆಬ್ರವರಿ 7ರಿಂದ ಮಾರ್ಚ್ 7ರವರೆಗೆ ರಾತ್ರಿ ಗಂಟೆ 11:50 ರವರೆಗೆ ಅವಕಾಶವಿದೆ. ಶುಲ್ಕ ಪಾವತಿಸಲು ಮಾರ್ಚ್ 7 ರಂದು ರಾತ್ರಿ 11. 50ರವರೆಗೆ ಅವಕಾಶವಿದೆ. ಅರ್ಜಿ ತಿದ್ದುಪಡಿಸಲು ಏಪ್ರಿಲ್ 26 ಕೊನೆಯ ದಿನಾಂಕವಾಗಿರುತ್ತದೆ. ಹಾಗೆಯೇ ಪ್ರವೇಶಾತಿ ಕಾರ್ಡ್ ಮೇ 1 ರಂದು ಬಿಡುಗಡೆಯಾಗಲಿದೆ. ಪರೀಕ್ಷೆ ಫಲಿತಾಂಶ ಪ್ರಕಟಿಸುವ ತಾತ್ಕಾಲಿಕ ದಿನಾಂಕ ಜೂನ್ 14 ಎಂದು ನಿಗದಿ ಮಾಡಲಾಗಿದೆ.
0 Comments