ಎಕ್ಸಿಮ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ

ಇಂಡಿಯಾ ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನಿ,‌ ಡೆಪ್ಯುಟಿ ಮ್ಯಾನೇಜರ್ ಮತ್ತು ಚೀಫ್ ಮ್ಯಾನೇಜರ್ ಸೇರಿ ಒಟ್ಟು 22 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಮಾರ್ಚ್ 22 ರಿಂದ ಏಪ್ರಿಲ್ 15 ರ ತನಕ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೇ ತಿಂಗಳಿನಲ್ಲಿ ನಿಕಿತ ಪರೀಕ್ಷೆ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ಡಿಜಿಟಲ್ ಟೆಕ್ನಾಲಜಿ, ರಿಸರ್ಚ್ ಮತ್ತು ಅನಾಲಿಸಿಸ್, ರಾಜಭಾಷಾ ಮತ್ತು ಕಾನೂನು ವಿಭಾಗದಲ್ಲಿ ನೇಮಕಾತಿ ನಡೆಯಲಿದೆ. 
ಡಿಜಿಟಲ್ ಟೆಕ್ನಾಲಜಿ ವಿಭಾಗದ ಹುದ್ದೆಗಳಿಗೆ ಬಿಇ/ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು, ರಿಸರ್ಚ್ ಮತ್ತು ಅನಾಲಿಸಿಸ್ ವಿಭಾಗದ ಹುದ್ದೆಗಳಿಗೆ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವೀಧರರು ರಾಜ ಭಾಷಾ ವಿಭಾಗದ ಹುದ್ದೆಗಳಿಗೂ ಪ್ರಯತ್ನಿಸಬಹುದು. ಎಲ್.ಎಲ್.ಬಿ ಪದವೀದರರು ಕಾನೂನು ವಿಭಾಗದ ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಪದವಿ ಮತ್ತು ಎಸಿಎಸ್ ಸದಸ್ಯತ್ವ ಪಡೆದವರು ಡೆಪ್ಯುಟಿ ಮ್ಯಾನೇಜರ್ ಅಥವಾ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳಿಗೆ ‌ ಗರಿಷ್ಠ ವಯೋಮಿತಿ 28 ವರ್ಷ, ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ 30 ಹಾಗೂ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ಎಸ್ಸಿ/ಎಸ್ಟಿ/ವಿಶೇಷ ಚೇತನ ಮತ್ತು ಆರ್ಥಿಕ ದುರ್ಬಲ ವರ್ಗದವರು 100 ರೂ. ಹಾಗೂ ಉಳಿದೆಲ್ಲಾ ವರ್ಗದವರು 600 ರೂ. ಶುಲ್ಕ ಪಾವತಿಸಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ www.eximbankindia.in ಭೇಟಿ ನೀಡಬಹುದು.

Post a Comment

0 Comments