ಐಪಿಎಲ್ ಆಟಗಾರರಿಗೂ ಕಠಿಣ ನಿಯಮ ಜಾರಿಗೊಳಿಸಿದ ಬಿಸಿಸಿಐ

ಬಿಸಿಸಿಐ ಕ್ರಿಕೆಟ್ ಆಟಗಾರರಿಗೆ ಸಂಬಂಧಿಸಿದಂತೆ ಆಗಾಗ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಅಂತರಾಷ್ಟ್ರೀಯ ಕ್ರಿಕೆಟ್ ಪ್ರವಾಸದ ಸಂದರ್ಭದಲ್ಲಿ ಆಟಗಾರರು ತಮ್ಮ ಸಂಬಂಧಿಕರ ಜೊತೆ ನಿಯಮ ಮೀರಿ ವರ್ತಿಸದಂತೆ ಆದೇಶ ಜಾರಿಗೊಳಿಸಿದ ಬಿಸಿಸಿಐ ಈಗ ಐಪಿಎಲ್ ಆಟಗಾರರಿಗೂ ಈ ನಿಯಮಗಳನ್ನು ಅನ್ವಯ ಮಾಡಿದೆ. 
ಐಪಿಎಲ್ ವೇಳೆ ಆಟಗಾರರು ಇರುವ ಸ್ಥಳ, ಡ್ರೆಸ್ಸಿಂಗ್ ರೂಮ್ಗೆ  ಕುಟುಂಬಸ್ಥರು ಬರುವಂತಿಲ್ಲ. ಎಲ್ಲಾ ಆಟಗಾರರು ತಮ್ಮ ತಂಡದ ಬಸ್ಗಳಲ್ಲೇ ಸಂಚರಿಸುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಫೆಬ್ರವರಿ 18ರಂದು ನಡೆದ ಸಭೆಯಲ್ಲಿ ಬಿಸಿಸಿಐ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಫ್ರಾಂಚೈಸಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದೆ. ಈ ಹೊಸ ನಿಯಮಗಳು ಕ್ರಿಕೆಟ್ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗಳಿಗೆ ಅನ್ವಯವಾಗಲಿದೆ. 

ಪಂದ್ಯವಿರುವ ದಿನದಂದು ಕುಟುಂಬಸ್ಥರ ಪ್ರವೇಶವನ್ನು ಈಗಾಗಲೇ ನಿಷೇಧಿಸಲಾಗಿತ್ತು.ಆದರೆ ಇದೀಗ ಈ ನಿಯಮಗಳನ್ನು ಅಭ್ಯಾಸ ಪಂದ್ಯಗಳಿಗೂ ವಿಸ್ತರಣೆ ಮಾಡಲಾಗಿದ್ದು, ಅಭ್ಯಾಸದ ವೇಳೆ ಸಂಬಂಧಿಕರು ಆಟಗಾರರ ಡ್ರೆಸ್ಸಿಂಗ್ ರೂಮಿಗೆ ಪ್ರವೇಶ ಮಾಡುವಂತಿಲ್ಲ. ಇನ್ನು ಪಂದ್ಯದ ವೇಳೆ ಆಟಗಾರರು ಕನಿಷ್ಠ ಎರಡು ಓವರ್ ಗಳಿಗಾದರೂ ಕಿತ್ತಳೆ, ನೇರಳೆ ಬಣ್ಣದ ಕ್ಯಾಪ್ ಧರಿಸಬೇಕು. ಪಂದ್ಯದ ಬಳಿಕ ಪ್ರೆಸೆಂಟೇಶನ್ ವೇಳೆ ಆಟಗಾರರು ತೋಳಿಲ್ಲದ ಜರ್ಸಿಗಳನ್ನು ಧರಿಸುವಂತಿಲ್ಲ. ಅಲ್ಲದೆ ಯಾವುದೇ ಜರ್ಸಿ ಸಂಖ್ಯೆಗಳ ಬದಲಾವಣೆ ಮಾಡುವುದಿದ್ದರೆ 24 ಗಂಟೆಗೂ ಮುಂಚೆ ತಿಳಿಸಬೇಕು ಎಂದು ಬಿಸಿಸಿಐ ಹೇಳಿದೆ.

Post a Comment

0 Comments