ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದೆ. ಜೊತೆಗೆ ರಾಜ್ಯದ ಜನತೆಗೆ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ದರವನ್ನು 950 ರಿಂದ ಬರೋಬ್ಬರಿ 4,998ಕ್ಕೆ ಏರಿಕೆ ಮಾಡಿದೆ. ಅಂದರೆ ಸ್ಮಾರ್ಟ್ ಮೀಟರ್ ದರ ಶೇಕಡ 400 ರಿಂದ 800 ರಷ್ಟು ಏರಿಕೆ ಮಾಡಲಾಗಿದೆ. ಬೆಸ್ಕಾಂನಿಂದ ಹೊಸ ವಿದ್ಯುತ್ ಮೀಟರ್ ಸಂಪರ್ಕ ಪಡೆಯುವವರು ಸ್ಮಾರ್ಟ್ ಮೀಟರ್ ಪಡೆಯಲು ಕಡ್ಡಾಯ ಮಾಡಿ ಆದೇಶದ ಬೆನ್ನಲ್ಲೇ ಮೀಟರ್ ದರ ಶೇಕಡ 400 ರಿಂದ ಶೇಕಡ 800 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಜನವರಿ 15, 2025ರಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಹೊಸ ಕಾಯಂ ಸಂಪರ್ಕ ಪಡೆಯಲೂ ಸಹ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದ್ದು ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಎಂಬ ಎರಡು ಆಯ್ಕೆಯನ್ನು ನೀಡಲಾಗಿದೆ. ಎಸ್ಪಿ-2 ಸ್ಮಾರ್ಟ್ ಮೀಟರ್ ದರವನ್ನು 2004 ರಿಂದ 9000ಕ್ಕೆ, ಎಸ್ಪಿ-3 ಪೇಸ್ಟ್ ದರವನ್ನು 2500 ರಿಂದ 28,000 ರೂ ಗೆ ಏರಿಕೆ ಮಾಡಲಾಗಿದೆ. ಇದು ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಾರಿಗೊಳ್ಳಲಿದೆ.
ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರೀಪೆಯ್ಡ್ ಮೀಟರ್ ಕಡ್ಡಾಯ ಮಾಡಲಾಗಿದ್ದು ಹೊಸ ಕಾಯಂ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಬೆಸ್ಕಾಂನಲ್ಲಿ ಜಾರಿಗೆ ತರುತ್ತಿರುವ ದರವನ್ನೇ ರಾಜ್ಯದ ಉಳಿದ ಎಸ್ಕಾಂ ಗಳ ವ್ಯಾಪ್ತಿಯಲ್ಲೂ ಜಾರಿ ಮಾಡಬೇಕು. ಏಕರೂಪದ ದರ ನೀತಿ ಅನ್ವಯವಾಗಬೇಕು ಎಂದು ಇತ್ತೀಚೆಗೆ ಇಂಧನ ಸಚಿವ ಕೆಜಿ ಚಾರ್ಜ್ ನೇತೃತ್ವದ ದಿನ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸ್ಮಾರ್ಟ್ ಮೀಟರ್ ನಿರ್ವಹಣೆಗೆ ಬೆಸ್ಕಾಂನಿಂದ ಮಾರ್ಗಸೂಚಿ ಹೊರಡಿಸಿದ್ದು ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ ನೂರು ರೂಪಾಯಿ ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರಿಚಾರ್ಜ್ಗೆ ಯಾವುದೇ ರೀತಿಯ ದರಮಿತಿ ಇರುವುದಿಲ್ಲ. ಇದಲ್ಲದೆ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲೇ ಕಡಿತ ಮಾಡಲಾಗುವುದು. ಬ್ಯಾಲೆನ್ಸ್ ಶೂನ್ಯವಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎನ್ನಲಾಗಿದೆ.
0 Comments