ಆಟೋ ದರ ಹೆಚ್ಚಳಕ್ಕೆ ಚಾಲಕರು ಒತ್ತಾಯ

ಎಲ್ಲಿ ನೋಡಿದರೂ ಬೆಲೆ ಏರಿಕೆಯದ್ದೇ ಸದ್ದು. ಬಿ.ಎಂ.ಟಿ.ಸಿ, ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಆಟೋ ರಿಕ್ಷಾ ಮೀಟರ್ ತರವನ್ನು ಹೆಚ್ಚಿಸುವಂತೆ ಆಟೋ ಚಾಲಕ ಮಾಲಕರಿಂದ ಒತ್ತಡ ಹೆಚ್ಚಾಗಿದೆ. 
ಮಾರ್ಚ್ ನಲ್ಲಿ ಆಟೋ ಪ್ರಯಾಣದರ ಹೆಚ್ಚಳವಾಗುವ ಸಾಧ್ಯತೆ ಇದೆ ಮಾರ್ಚ್ 12ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯ ಪೂರ್ವ ವಿಭಾಗದ ಡೀಸಿಪಿ ಕಚೇರಿಯಲ್ಲಿ ಈ ಕುರಿತು ಸಭೆ ನಡೆಯಲಿದ್ದು ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯಲಿದೆ. 

2021 ರಲ್ಲಿ ಆಟೋಮಿಟರ್ ಹೆಚ್ಚಲ್ಲ ಮಾಡಲಾಗಿತ್ತು. ಆಟೋ ಸಿ.ಎನ್.ಜಿ ಒಂದು ಕೆಜಿಗೆ 88 ರೂಪಾಯಿ ಆಗಿದ್ದು, ಎಲ್.ಪಿ.ಜಿ ದರ ಕೆಜಿಗೆ 61 ರೂಪಾಯಿ ಏರಿಕೆಯಾಗಿದೆ. ಆದ್ದರಿಂದ ಮೀಟರ್ ದರವು ಏರಿಕೆ ಮಾಡಲೇಬೇಕು ಎಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ. ಶೀಘ್ರದಲ್ಲೇ ಆಟೋದರವು ಪರಿಷ್ಕರಣೆಯಾಗಿ ಮತ್ತೆ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳು ಇವೆ.

Post a Comment

0 Comments