ಐಒಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಾರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಭಾರತದ ಅತಿ ದೊಡ್ಡ ವಾಣಿಜ್ಯ ಉದ್ಯಮವಾಗಿದೆ. ಈ ಸಂಸ್ಥೆಯು ದೇಶಾದ್ಯಂತ ಅಸಿಸ್ಟೆಂಟ್ ಕ್ವಾಲಿಟಿ ಕಂಟ್ರೋಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಆನ್ಲೈನ್ ಮೂಲಕ ಮಾರ್ಚ್ 21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಕೆಮಿಸ್ಟ್ರಿಯಲ್ಲಿ ಎಮ್.ಎಸ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಉದ್ದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. 

ಸಾಮಾನ್ಯ/ಇಡಬ್ಲ್ಯೂಡಿ/ಓಬಿಸಿ ಅಭ್ಯರ್ಥಿಗಳು 600 ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಎಸ್ಸಿ/ಎಸ್ಟಿ/ಅಂಗವಿಕಲ/ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. 

ಅಸಿಸ್ಟೆಂಟ್ ಕ್ವಾಲಿಟಿ ಕಂಟ್ರೋಲ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.40,000 -1,40,000 ವರೆಗೆ ವೇತನವನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಶುಲ್ಕ ಪಾವತಿಸದ, ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ದಾಖಲೆ ಪರಿಶೀಲನೆ ವೇಳೆ 
 ಸಲ್ಲಿಸಿದ ಮೂಲ ಪ್ರತಿಯನ್ನು ನೀಡಬೇಕು. ಅರ್ಜಿಯೊಂದಿಗೆ ನೊಂದಾಯಿತ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಬೇಕು. ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗುಂಪು ಚರ್ಚೆ, ವ್ಯಕ್ತಿಗತ ಸಂದರ್ಶನ ನಡೆಸುವ ಮೂಲಕ ನಡೆಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಏಪ್ರಿಲ್ ನಲ್ಲಿ ಮಾಡುವ ಸಾಧ್ಯತೆ ಇದೆ. 

ಅರ್ಜಿ ಸಲ್ಲಿಕೆಯ ಕೊನೆಯ ದಿನಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಗರಿಷ್ಠ ವಯೋಮಿತಿ 30 ವರ್ಷದೊಳಗಿರಬೇಕು. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋ ಸಡಿಲಿಕೆ ನಿಗದಿಪಡಿಸಲಾಗಿದೆ. 

ಅರ್ಜಿ ಸಲ್ಲಿಸಲು 23.03.2025 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ iocl.com ಹಾಗೂ ಅಧಿಸೂಚನೆಗಾಗಿ https://bit.ly/3DhIHHs ಅನ್ನು ಪರಿಶೀಲಿಸಬಹುದು.

Post a Comment

0 Comments