ಚೈತ್ರ ಕೃಷ್ಣ ಅಮಾವಾಸ್ಯೆಯ ದಿನವಾದ ಇಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಭಾಗಶಃ ಸೂರ್ಯ ಗ್ರಹಣವೆಂದು ಹೇಳಲಾಗಿರುವ ಈ ಗ್ರಹಣದ ಗೋಚರ ಭಾರತಕ್ಕಿಲ್ಲ. ಅಮೆರಿಕ, ಆಫ್ರಿಕಾ, ಏಷ್ಯಾದ ಕೆಲ ಭಾಗಗಳು, ಯೂರೋಪ್‌ನಲ್ಲಿ ಈ ಗ್ರಹಣದ ಗೋಚರವನ್ನು ಕಾಣಬಹುದಾಗಿದೆ ಎಂದು ನಾಸಾ ತಿಳಿಸಿದೆ.
ಭಾರತೀಯ ಕಾಲಮಾನ ಪ್ರಕಾರ ಈ ಗ್ರಹಣವು ಮಧ್ಯಾಹ್ನ ಗಂಟೆ 2.20ಕ್ಕೆ ಆರಂಭವಾಗಿ ಸಂಜೆ 6.13ಕ್ಕೆ ಮುಕ್ತಾಯಗೊಳ್ಳಲಿದೆ. ಈ ಗ್ರಹಣದ ಗೋಚರ ಭಾರತಕ್ಕೆ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
0 Comments