ಹಲವಾರು ದೇಶಗಳಲ್ಲಿ ಮಾತೃಭಾಷೆ ಶಿಕ್ಷಣದ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದರೂ ಇದಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯ ನೀತಿ ನಿಯಮಗಳು ಜಾರಿಯಾಗಿರುವುದು ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ.
ಜಗತ್ತಿನಲ್ಲಿ ಸುಮಾರು 25 ಕೋಟಿ ಜನರು ಮಾತೃಭಾಷೆ ಶಿಕ್ಷಣದ ಕೊರತೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯವಿರುವ ದೇಶಗಳಲ್ಲಿ ಮಾತೃಭಾಷೆ ಶಿಕ್ಷಣದ ಕೊರತೆಯು ಶೇಕಡಾ 90ರವರೆಗೂ ಇರುತ್ತದೆ. ಹೀಗಾಗಿ ಸರ್ವರಿಗೂ ಪ್ರಯೋಜನವಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯೊಂದಿಗೆ ಬಹುಭಾಷಾ ನೀತಿ ಮತ್ತು ಪದ್ಧತಿಯನ್ನು ಜಾರಿಗೆ ತರಬೇಕೆಂದು ಈ ತಂಡ ಶಿಫಾರಸು ಮಾಡಿದೆ. 25ನೇ ವರ್ಷದ ಅಂತರಾಷ್ಟ್ರೀಯ ಮಾತೃಭಾಷೆ ದಿನದಂದು ಬಿಡುಗಡೆ ಮಾಡಲಾದ ವರದಿಯಲ್ಲಿ ಈ ಅಂಶವನ್ನು
ವಿವರಿಸಲಾಗಿದೆ.
0 Comments