1980ರ ಪಾಸ್ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತಂದಿರುವ ಅಧಿಕೃತ ಟಿಪ್ಪಣಿಯನ್ನು ಸರ್ಕಾರ ಈ ವಾರ ಹೊರಡಿಸಿದೆ. ಟಿಪ್ಪಣಿಯನ್ನು ಅಧಿಕೃತವಾಗಿ ಗೆಜೆಟ್ ನಲ್ಲಿ ಪ್ರಕಟಿಸಿದ ನಂತರ ನಿಯಮಗಳು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನನ-ಮರಣ ರಿಜಿಸ್ಟ್ರಾರ್, ಪಾಲಿಕೆ ಅಥವಾ ಜನನ ಮರಣಗಳ ನೋಂದಣಿ ಕಾಯ್ದೆ-1969ರ ಅಡಿಯಲ್ಲಿ ಅಧಿಕಾರ ಹೊಂದಿರುವ ಯಾವುದೇ ಇತರ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರಗಳನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ ಎಂದು ಹೊಸ ನಿಯಮ ಹೇಳುತ್ತದೆ 2023ರ ಅಕ್ಟೋಬರ್ 1 ಕ್ಕೂ ಮುನ್ನ ಹುಟ್ಟಿದವರು ಚಾಲನಾ ಪರವಾನಗಿ ಅಥವಾ ಶಾಲಾ ವರ್ಗಾವಣೆ ಪತ್ರಗಳಂತಹ ಇತರ ದಾಖಲೆಗಳನ್ನು ಜನ್ಮದಿನದ ಪುರಾವೆಯಾಗಿ ಸಲ್ಲಿಸಬಹುದಾಗಿದೆ.
0 Comments