ಯುವ ನಿಧಿ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿರುವ ಅಭ್ಯರ್ಥಿಗಳು, ಈ ಮೊದಲು ಪ್ರತಿ ತಿಂಗಳ 25ನೇ ತಾರೀಕಿನೊಳಗೆ ತಾನು ನಿರುದ್ಯೋಗಿಯೆಂದೂ, ವ್ಯಾಸಂಗ ಮುಂದುವರಿಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿ ಅಲ್ಲವೆಂದು ಸ್ವಯಂ ಘೋಷಣೆ ಮಾಡುವ ನಿಯಮವಿತ್ತು. ಈ ನಿಯಮದ ಬದಲಾಗಿ ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಅಭ್ಯರ್ಥಿಗಳು ನೀಡುವ ಸ್ವಯಂ ಘೋಷಣೆಯಲ್ಲಿ ಪ್ರತಿ ತಿಂಗಳ ನಿರುದ್ಯೋಗದ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಅವಕಾಶವನ್ನು ನೀಡಲಾಗಿದೆ. ಅದರಂತೆ ಫೆಬ್ರವರಿ, ಮೇ, ಆಗಸ್ಟ್ ಹಾಗೂ ನವೆಂಬರ್ ತಿಂಗಳಲ್ಲಿ ವಿವರಗಳನ್ನು ನೀಡಬೇಕು. ಈಗಾಗಲೇ ಫೆಬ್ರವರಿಯಲ್ಲಿ ಸ್ವಯಂ ಘೋಷಣೆ ವಿವರಗಳನ್ನು ನೀಡಿರುವವರು ಮಾರ್ಚ್-2025, ಏಪ್ರಿಲ್ -2025 ಹಾಗೂ ಮೇ-2025ರ ಸ್ವಯಂ ಘೋಷಣೆಯನ್ನು ಮೇ -2025 ತಿಂಗಳಿನಲ್ಲಿ ನೀಡಬೇಕು. ಸ್ವಯಂ ಘೋಷಣೆಗೆ ಅಭ್ಯರ್ಥಿಗಳು https://sevasindhugs.karnataka.gov.in ವೆಬ್ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ.
0 Comments