ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ದಿನಗಣನೆ

ಬಹುನಿರೀಕ್ಷಿತ ಏಕೀಕೃತ ಪಿಂಚಣಿ ಯೋಜನೆ/ಯೂನಿಫೈಡ್ ಪೆನ್ಷನ್ ಸ್ಕೀಮ್- ಯುಪಿಎಸ್ ಕಾರ್ಯಾಚರಣೆ ಆರಂಭಕ್ಕೆ ಸಂಬಂಧಿಸಿದಂತೆ ಪಿ ಎಫ್ ಆರ್ ಡಿ ಐ ಗುರುವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಏಕೀಕೃತ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ದಿನಗಣನೆ ಆರಂಭವಾದಂತಾಗಿದೆ.
ಈ ಯೋಜನೆಗೆ 25 ವರ್ಷ ಸೇವೆ ಸಲ್ಲಿಸಿರುವವರು ಅರ್ಹರಾಗಿರುತ್ತಾರೆ. ನಿವೃತ್ತಿಯಾಗುವ ಮೊದಲಿನ 12 ತಿಂಗಳು ಪಡೆದ ಸರಾಸರಿ ಮೂಲವೇತನದ ಶೇಕಡ 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡುವುದನ್ನು ಖಚಿತಪಡಿಸುವ ಯೋಜನೆ ಇದಾಗಿದೆ. ಈ ಯೋಜನೆಗೆ ಸಂಬಂಧಿಸಿದ ನಿಯಮಗಳು ಏಪ್ರಿಲ್ 1 ತಾರೀಕಿನಿಂದಲೇ ಜಾರಿಗೆ ಬರಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿ ಸೇರಿರುವ ಪ್ರಸ್ತುತ ಸರಕಾರಿ ನೌಕರರು ಮತ್ತು ಏಪ್ರಿಲ್ 1ರಿಂದ ಕೇಂದ್ರ ಸರಕಾರಿ ಸೇವೆಗೆ ಹೊಸದಾಗಿ ಸೇರ್ಪಡೆಯಾಗುವ ಉದ್ಯೋಗಿಗಳನ್ನು ಈ ಹೊಸ ಯೋಜನೆ ಅಡಿ ನೋಂದಾಯಿಸಿಕೊಳ್ಳುವುದಕ್ಕೆ ಈ ನಿಯಮಗಳು ಅವಕಾಶವನ್ನು ನೀಡುತ್ತವೆ.

ಎನ್‌ಪಿಎಸ್ 2004ರ ಜನವರಿ ಒಂದರಿಂದ ಜಾರಿಗೆ ಬಂದ ಯೋಜನೆ. 2024ರ ಆಗಸ್ಟ್ 24ರಂದು ರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಯುಪಿಎಸ್‌ಕೆ ಅನುಮೋದನೆ ನೀಡಿದೆ. ದೇಶದಲ್ಲಿ ಕೇಂದ್ರ ಸರ್ಕಾರದ 23 ಲಕ್ಷ ಉದ್ಯೋಗಿಗಳಿದ್ದು ಅವರು ಎನ್‌ಪಿಎಸ್ ಮತ್ತು ಯುಪಿಎಸ್ ಪೈಕಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. 2004 ಜನವರಿಗಿಂತ ಮೊದಲು ಜಾರಿಯಲ್ಲಿದ್ದ ಹಳೆ ಪಿಂಚಣಿ ಯೋಜನೆಗೆ ಉದ್ಯೋಗಿಗಳು ತಮ್ಮ ಕೊನೆಯ ತಿಂಗಳ ಮೂಲವೇತನದ ಶೇಕಡ 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತಿದ್ದರು. ಯುಪಿಎಸ್ ನಡಿ ಉದ್ಯೋಗಿಗಳು ತಮ್ಮ ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇಕಡ 10ರಷ್ಟು ವಂತಿಗೆಯಾಗಿ ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರಕಾರ ಶೇಕಡ 18.5ರಷ್ಟು ಮೊತ್ತವನ್ನು ಹೊಂದಿಗೆಯಾಗಿ ನೀಡುತ್ತಾರೆ ಆದರೆ ಕೊನೆಗೆ ಉದ್ಯೋಗಿಗೆ ಸಿಗುವ ಮೊತ್ತವು ಆ ನಿಧಿಯ ಮಾರುಕಟ್ಟೆ ಲಾಭದ ಪ್ರಮಾಣವನ್ನು ಅವಲಂಬಿಸಿರುತ್ತದೆ. ನಿಧಿಯನ್ನು ಬಹುತೇಕ ಸರ್ಕಾರಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಪಿಎಫ್ಆರ್‌ಡಿಎ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಈ ಯೋಜನೆಗೆ ನೋಂದಣಿ ಮತ್ತು ಕ್ಲೇಮ್ ಫಾರ್ಮುಗಳು ಏಪ್ರಿಲ್ 1ರಿಂದ ಸಂಬಂಧಪಟ್ಟ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ ಉದ್ಯೋಗಿಗಳು ಭೌತಿಕವಾಗಿ ಫಾರ್ಮ್ ಸಲ್ಲಿಸಬಹುದಾಗಿದೆ. ಈ ಯೋಜನೆಗೆ 25 ವರ್ಷ ಸೇವೆ ಸಲ್ಲಿಸಿರುವ ನೌಕರರು ಅರ್ಹರಾಗಿರುತ್ತಾರೆ. ಆದರೆ ಸೇವೆಗೆ ರಾಜೀನಾಮೆ ನೀಡಿರುವ, ಸೇವೆಯಿಂದ ವಜಾಗೊಂಡಿರುವ ಉದ್ಯೋಗಿಗಳು ಯುಪಿಎಸ್ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ.

Post a Comment

0 Comments