ಉತ್ತಮ ಸೇವೆಗಾಗಿ 219 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಪ್ರಧಾನ!!

ಸಮಾಜದಲ್ಲಿ ಪೊಲೀಸರು ಹಗಳಿರುಳು
ತ ಶ್ರಮಿಸುತ್ತಿರುವುದರಿಂದ ಶಾಂತಿ ಸುವ್ಯವಸ್ಥೆ ನೆಲೆಯಾಗಿದೆ. ಇಂತಹ ಪೊಲೀಸರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಪದಕವನ್ನು ಘೋಷಿಸಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 197 ಅಧಿಕಾರಿಗಳು, 22 ಸಿಬ್ಬಂದಿಗಳಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಸರಕಾರ ಘೋಷಿಸಿದೆ.
ಕರ್ನಾಟಕದಲ್ಲಿ ನತ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯ ಗುಪ್ತದಳ ಮತ್ತು ನಕ್ಸಲ್ ವಿಗ್ರಹ ಪಡೆಯ ಅಧಿಕಾರಿ, ಸಿಬ್ಬಂದಿಗಳು ಸೇರಿ 22 ಮಂದಿ ಮುಖ್ಯಮಂತ್ರಿ ಪದಕಕ್ಕೆ ಪಾತ್ರರಾಗಿದ್ದಾರೆ. ರಾಜ್ಯ ಗುಪ್ತದಲ್ಲ ನಿರ್ದೇಶಕ ಹೇಮಂತ್ ನಿಂಬಾಲ್ಕರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿಕೆ ಬಾಬಾ, ಸಿಐಡಿ ಎಸ್ಪಿ ಡಾ. ಅನೂಪ್ ಶೆಟ್ಟಿ, ಈಶಾನ್ಯ ವಿಭಾಗ ಡಿಸಿಪಿ ವಿಜೆ ಸುಜಿತ್, ಉತ್ತರ ವಿಭಾಗ ಡಿಸಿಪಿ ಸೈದುಲ್ಲಾ ನಾಯ್ಕ್ ಅದಾವತ್, ಹಾವೇರಿ ಜಿಲ್ಲೆ ಎಸ್ಪಿ ಅಂಷುಕುಮಾರ್, ವಿಜಯಪುರ ಜಿಲ್ಲೆ ಎಸ್ಪಿ  ರಾಮನಗೌಡ ಎ ಹಟ್ಟಿ, ರಾಜ್ಯ ಗುಪ್ತದಳ ಹೆಚ್ಚುವರಿ ನಿರ್ದೇಶಕ ಭದ್ರತೆ ಡಾ ವೈ ಎಸ್ ರವಿಕುಮಾರ್, ನಿರೀಕ್ಷಕ ಪಶ್ಚಿಮ ವಲಯ ಅಮಿತ್ ಸಿಂಗ್, ಜಂಟಿ ನಿರ್ದೇಶಕ ಹರಿರಾಮ್ ಶಂಕರ್, ನಕ್ಸಲ್ ನಿಗ್ರಹ ಪಡೆ ಎಸ್ಪಿ ಜೀನೇಂದ್ರ ದ್ಯಾಮ ಸೇರಿ ಒಟ್ಟು 219 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ದೊರೆತಿದೆ.

Post a Comment

0 Comments