ಸರಕಾರಿ ನೌಕರರಿಗೆ ಅತ್ಯುತ್ತಮ ವೇತನ ಪ್ಯಾಕೇಜ್ ಘೋಷಣೆ!!

ಸರಕಾರಿ ನೌಕರರಿಗೆ ಸರಕಾರವು ಅತ್ಯಾಕರ್ಷಕ ವೇತನ ಪ್ಯಾಕೇಜ್ ಘೋಷಣೆ ಮಾಡಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಸರಕಾರಿ ನೌಕರರು ಯಾವುದೇ ಕಂತು ಪಾವತಿಸದಿದ್ದರೂ ಒಂದು ಕೋಟಿ ರೂಪಾಯಿವರೆಗೆ ಅಪಘಾತ ವಿಮಾ ಪರಿಹಾರ ಪಡೆಯಲಿದ್ದಾರೆ. ಅಷ್ಟೇ ಅಲ್ಲದೆ ವೇತನ ವಿಳಂಬವಾದರೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೌಕರರು ಪಡೆಯಲಿದ್ದಾರೆ. ವೇತನ ಖಾತೆ ಹೊಂದಿರುವ ಸರಕಾರಿ ನೌಕರರಿಗೆ ರಾಷ್ಟ್ರೀಕೃತ ಹಾಗೂ ರಾಷ್ಟ್ರಮಟ್ಟದ ಖಾಸಗಿ ಬ್ಯಾಂಕುಗಳು ವೇತನ ಸೌಲಭ್ಯ ಪ್ಯಾಕೇಜ್ ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸಲ್ಲಿಸಿದ ಪ್ರಸ್ತಾವಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.
ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿ ರಕ್ಷಣೆ ಕುರಿತು ಆರ್ಥಿಕ ಇಲಾಖೆ ಆದೇಶ ಹೊರಡಿಸಿತ್ತು. ಆದೇಶ ಹೊರ ಬಿದ್ದ ಬೆನ್ನಲ್ಲೇ ಹಲವು ಬ್ಯಾಂಕುಗಳು ಆಕರ್ಷಕ ವೇತನ ಪ್ಯಾಕೇಜ್ ಸೌಲಭ್ಯಗಳನ್ನು ಘೋಷಿಸಿದೆ. ನೌಕರರು ತಾವು ಪ್ರತೀ ತಿಂಗಳು ವೇತನ ಪಡೆಯುವ ಬ್ಯಾಂಕುಗಳ ಮೂಲಕ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ವಿವಿಧ ವೇತನ ಪ್ಯಾಕೇಜ್ ಸೌಲಭ್ಯ ಪಡೆಯಬಹುದು. ಈಗ ವೇತನ ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ ಇರುವ ಸೌಲಭ್ಯಗಳು ತೃಪ್ತಿಕರವಾಗಿರದಿದ್ದರೆ ಯಾವ ಬ್ಯಾಂಕುಗಳು ಹೆಚ್ಚಿನ ಆಕರ್ಷಕ ಪ್ಯಾಕೇಜ್ ಗಳನ್ನು ನೀಡುತ್ತವೆಯೋ ಅಂತಹ ಬ್ಯಾಂಕುಗಳಿಗೆ ತಮ್ಮ ವೇತನ ಖಾತೆಗಳನ್ನು ನೌಕರರು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.

Post a Comment

0 Comments