ಭಾರತದ ಪ್ರಧಾನಿಯವರನ್ನು ಅತ್ಯಂತ ಆಕರ್ಷಕ ವ್ಯಕ್ತಿಯೆಂದ ಫ್ರಿಡ್ಮನ್



ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಅತ್ಯಂತ ವಿಶೇಷ ವ್ಯಕ್ತಿತ್ವವುಳ್ಳ ಗೌರವಾನ್ವಿತ ವ್ಯಕ್ತಿ ಎನಿಸಿಕೊಂಡವರು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮೋದಿಜಿಯವರನ್ನು ಪ್ರೀತಿಸದವರಿಲ್ಲ. ಅಂತಹ ಮೋದಿಜಿಯವರನ್ನು ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬರು ಎಂದು ಅಮೇರಿಕಾ ಮೂಲದ ಜನಪ್ರಿಯ ಪೋಸ್ ಕಾಸ್ಟರ್ ಲೆಕ್ಸ್ ಫ್ರಿಡ್ ಮನ್ ತಿಳಿಸಿದ್ದಾರೆ.

ಲೆಕ್ಸ್ ಫ್ರಿಡ್ಮನ್ ಅವರು ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಾಡ್ಕಾಸ್ಟ್ ಗಳನ್ನು ನಡೆಸುತ್ತಾರೆ. ಹಾಗೆಯೇ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶಿಸಲು ನಿರ್ಧರಿಸಲಾಗಿದೆ ಎಂದು ಫ್ರಿಡ್ಮನ್ ಹೇಳಿದ್ದಾರೆ. ತನ್ನ ಬಹುನಿರೀಕ್ಷಿತ ಪಾಡ್ ಕಾಸ್ಟ್ ಗೂ ಮುನ್ನ, ತಾನು ಅಧ್ಯಯನ ಮಾಡಿದ ಅತ್ಯಂತ ಆಕರ್ಷಕ ವ್ಯಕ್ತಿ ಮೋದಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿದ್ದಾರೆ. ಮೋದಿಯವರನ್ನು ಭೇಟಿಯಾಗುವ ಮುನ್ನ ಉಪವಾಸ ಮಾಡುವುದಾಗಿಯೂ ಹೇಳಿದ್ದಾರೆ. ಮೋದಿಯವರ ಬಗೆಗೆ ಮಾಡಿರುವ ಈ ಪೋಸ್ಟ್ ಹಲವಾರು ಸೆಲೆಬ್ರಿಟಿಗಳಿಂದ ಮೆಚ್ಚುಗೆ, ಪ್ರತಿಕ್ರಿಯೆ ಪಡೆಯುತ್ತಿದೆ.

ಲೆಕ್ಸ್ ಫ್ರಿಡ್ಮನ್ ಅವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಭೌಗೋಳಿಕ ರಾಜಕೀಯದಲ್ಲಿ ಆಳವಾದ ಆಸಕ್ತಿ ಹೊಂದಿರುವ ಪ್ರಸಿದ್ಧ ಪಾಡ್ ಕಾಸ್ಟರ್. ಇವರು ಜಗತ್ತಿನ ಪ್ರಸಿದ್ಧ ವ್ಯಕ್ತಿಗಳಾದ ಎಲೋನ್ ಮಸ್ಕ್, ಜೆಫ್ ಬೆಜೋಸ್, ಮಾರ್ಕ್ ಜುಕರ್ ಬರ್ಗ್ ಸೇರಿದಂತೆ ಹಲವರೊಂದಿಗೆ ಸಂದರ್ಶನಗಳನ್ನು ಮಾಡಿದ್ದಾರೆ.

Post a Comment

0 Comments