ಲೋಕಾರ್ಪಣೆಗೆ ಸಿದ್ಧಗೊಂಡ ಪಂಬನ್ ಬ್ರಿಡ್ಜ್ ರಾಮೇಶ್ವರಂಗೆ ಮತ್ತೆ ರೈಲು ಸಂಚಾರ ಆರಂಭ



12 ಜ್ಯೋತಿರ್ಲಿಂಗಗಳ ಪೈಕಿ ಒಂದು ಎಂದು ಕರೆಸಿಕೊಳ್ಳುವ ತಮಿಳುನಾಡಿನ ರಾಮೇಶ್ವರಂ ಕ್ಷೇತ್ರವನ್ನು ಸಂಪರ್ಕಿಸುವ ನವ ನಿರ್ಮಿತ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೇ ಸಮುದ್ರ ಸೇತುವೆ “ಪಂಬನ್ ಬ್ರಿಡ್ಜ್” ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಉದ್ಘಾಟಿಸಲಿದ್ದು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳಲ್ಲಿ ಈ ಸೇತುವೆ ರೈಲು ಸಂಚಾರಕ್ಕೆ ಮುಕ್ತವಾಗಲಿದೆ. 
ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ವಿಶೇಷ ಸೇತುವೆಯನ್ನು ನಿರ್ಮಿಸಲಾಗಿದೆ. ಸಮುದ್ರದಲ್ಲಿ ನಿರ್ಮಿಸಿರುವ ಈ ಸೇತುವೆಯ ಕೆಳಗಡೆ ದೊಡ್ಡ ದೊಡ್ಡ ಹಡಗುಗಳು ಸಂಚರಿಸಲು ಅನುವಾಗುವಂತೆ ಸೇತುವೆ ಮಧ್ಯ ಭಾಗ ಮೇಲೆತ್ತಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದು ಆಧುನಿಕ ಇಂಜಿನಿಯರಿಂಗ್ ನ ವಿಶೇಷ ನಿರ್ಮಾಣ ಎನಿಸಿಕೊಳ್ಳಲಿದೆ.

ದ್ವೀಪನಗರಿ ರಾಮೇಶ್ವರಂ ರೈಲ್ವೇ ನಿಲ್ದಾಣ ಹಾಗೂ ರಾಮನಾಥಪುರಂ ಜಿಲ್ಲೆಯ ಮಂಡಪ್ಪಂ ರೈಲು ನಿಲ್ದಾಣದ ನಡುವೆ ಈ ಪಂಬನ್ ಸೇತುವೆ ನಿರ್ಮಾಣವಾಗಿದೆ. ದಕ್ಷಿಣ ರೈಲ್ವೆ ವಲಯವು ರೈಲ್ವೆ ವಿಕಾಸ ನಿಗಮ ಲಿ. ಸಹಯೋಗದಲ್ಲಿ 534 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ.

ಪಂಬನ್ ಸೇತುವೆ ವಿಶೇಷತೆ??
110 ವರ್ಷಗಳ ಹಳೆಯ ಸೇತುವೆಯನ್ನು ರದ್ದುಗೊಳಿಸಿ ಇದೀಗ ಪಂಬನ್ ಸೇತುವೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. 2.10ಕೀ.ಮೀ ಉದ್ದದ ಸಮುದ್ರ ದಾಟಲು ನೆರವಾಗುವ ಪಂಬನ್ ಸೇತುವೆ 333 ಪಿಲ್ಲರ್ ಗಳ ಮೇಲೆ ನಿಂತಿದೆ. ಮೀನುಗಾರಿಕೆ, ಸರಕು, ನೌಕಾದಳದ ದೈತ್ಯ ಹಡಗುಗಳು ಸೇತುವೆ ಕೆಳಗಡೆ ಬಂದಾಗ ಹಾದು ಹೋಗಲು ಸಾಧ್ಯವಾಗುವಂತೆ ಸೇತುವೆಯ 72.5ಮೀ ಮಧ್ಯಭಾಗವನ್ನು 17 ಮೀಟರ್ ಮೇಲಕ್ಕೆ ಎತ್ತರಿಸಲಾಗುತ್ತದೆ ಈ ಕಾರ್ಯಕ್ಕಾಗಿ 5.30 ನಿಮಿಷ ತಗುಲುತ್ತದೆ. ಈ ವರ್ಟಿಕಲ್ ಲಿಫ್ಟ್ ತಂತ್ರಜ್ಞಾನವನ್ನು ನೆರವಿನಿಂದ ಅಳವಡಿಸಲಾಗಿದೆ ಉಳಿದಂತೆ ಸೇತುವೆ ಪೂರ್ಣ ಸ್ವದೇಶಿ ತಂತ್ರಜ್ಞಾನಗಳ ಬಳಕೆಯಿಂದ ನಿರ್ಮಾಣವಾಗಿದೆ. ಪ್ರಸ್ತುತ ಈ ಸೇತುವೆ ಮೇಲೆ ವಿದ್ಯುದೀಕರಣಗೊಂಡ ಒಂದು ಹಳಿ ಇದೆ. ಭವಿಷ್ಯದಲ್ಲಿ ಜೋಡಿಹಳಿ ಅವಕಾಶ ಇಟ್ಟುಕೊಳ್ಳಲಾಗಿದೆ.

ಸೇತುವೆಯು ಸೆನ್ಸಾರ್ಗಳನ್ನು ಹೊಂದಿದ್ದು ಇದರಿಂದ ಗಾಳಿಯ ವೇಗ ಪತ್ತೆ, ಸಮಸ್ಯೆ ಕಂಡು ಬಂದಲ್ಲಿ ರೈಲು ನಿಲ್ಲಿಸುವ ವ್ಯವಸ್ಥೆ ಇದೆ. ಇನ್ನು ಹಳೆಯ ಪಂಬನ್ ಬ್ರಿಡ್ಜ್ ನಲ್ಲಿ ರೈಲು ಕೇವಲ 10 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು. ಆದರೆ ಹೊಸ ಬ್ರಿಡ್ಜ್ ನಲ್ಲಿ 75 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸುವ ಅವಕಾಶವಿದೆ. 

ಅಮೇರಿಕಾದ ಮಿಸ್ಸೌರಿಯಲ್ಲಿರುವ ಮಯಾಮಿ ಬ್ರಿಡ್ಜ್ ಬಳಿಕ ಪಂಬನ್ ಬ್ರಿಡ್ಜ್ ವಿಶ್ವದಲ್ಲೇ ಅತಿ ಹೆಚ್ಚು ತುಕ್ಕು ಹಿಡಿಯುವಂತಹ ವಾತಾವರಣದಲ್ಲಿದೆ. ಹೀಗಾಗಿ ಸೇತುವೆಗೆ ಝಿಂಕ್ ಮೆಟಲೈಸಿಂಗ್ ಪಿಲೆಕ್ಸ್ ಝಿಂಕ್ ರಿಚ್ ಪ್ರೈಮರ್ ಪಾಲಿಸೊಲೋಕ್ಸೆನ್ ಬಣ್ಣವನ್ನು ಎರಡು ಕೋರ್ಟ್ಗಳಲ್ಲಿ ಬಳಿಯಲಾಗಿದೆ. ಈ ಮೂಲಕ ತುಕ್ಕಿನಿಂದ ಹೊಸ ಸೇತುವೆ ರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ

Post a Comment

0 Comments