ಭಾರತೀಯ-ಅಮೆರಿಕನ್ ಜಾಗತಿಕ ಉದ್ಯಮಿ ಮತ್ತು ಸಂಗೀತಗಾರ್ತಿ, ಚೆನ್ನೈ ಮೂಲದ ಅಮೆರಿಕನ್ ಉದ್ಯಮಿ ಇಂದಿರಾ ನೂಯಿ ಅವರು ಸಹೋದರಿ ಚಂದ್ರಿಕಾ ಟಂಡನ್ 67ನೇ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಭಾನುವಾರ ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿ ಆಯೋಜನೆ ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 67ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಪ್ರಾಚೀನ ಮಂತ್ರಗಳನ್ನು ವಿಶ್ವ ಸಂಗೀತದೊಂದಿಗೆ ಬೆರೆಸುವ ತ್ರಿವೇಣಿ ಆಲ್ಬಮ್ ಗಾಗಿ ‘ನ್ಯೂ ಏಜ್’ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಚಂದ್ರಿಕಾ ಟಂಡನ್ ಅವರಿಗೆ 71 ವರ್ಷ ವಯಸ್ಸು. ಈ ವಿಭಾಗದಲ್ಲಿ ಭಾರತೀಯರಾದ ರಿಕ್ಕಿ ಕೇಜ್ ಹಾಗೂ ಅನೌಷ್ಕ ಶಂಕರ್ ಸ್ಪರ್ಧೆಯಲ್ಲಿದ್ದು ಅವರನ್ನು ಹಿಂದಕ್ಕಿ ಟಂಡನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.
ಟಂಡನ್ ಅವರು ತಮ್ಮ ಇತ್ತೀಚಿನ ಸಹಯೋಗದ ಆಲ್ಬಮ್ಗಾಗಿ ಅತ್ಯುತ್ತಮ ನವ ಯುಗ, ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಮ್ ವಿಭಾಗದಲ್ಲಿ ಗ್ರಾಮ ಫೋನ್ ಪ್ರಶಸ್ತಿ ಗೆದ್ದಿದ್ದಾರೆ. ಅವರು ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್ಮನ್ ಮತ್ತು ಜಪಾನಿನ ಸೆಲ್ಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್ ನಲ್ಲಿ ಹಳೆ ವೈದಿಕ ಮಂತ್ರಗಳನ್ನು ಪ್ರಸ್ತುತಪಡಿಸಿದ್ದಾರೆ. ಇದರ ಜೊತೆಗೆ ಅವುಗಳ ಮೂರು ವಿಭಿನ್ನ ಶೈಲಿಗಳನ್ನು ಪ್ರತಿನಿಧಿಸಿದರು.
ಸಂಗೀತವು ಪ್ರೀತಿಯಾಗಿದೆ, ಸಂಗೀತವು ನಮ್ಮೆಲ್ಲರೊಳಗಿನ ಬೆಳಕನ್ನು ಬೆಳಗಿಸುತ್ತದೆ. ನಮ್ಮ ಕರಾಳ ದಿನಗಳಲ್ಲಿಯೂ, ಸಂಗೀತವು ಸಂತೋಷ ಮತ್ತು ನಗುವನ್ನು ಹರಡುತ್ತದೆ ಎಂದು ಲಾಸ್ ಏಂಜಲೀಸ್ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವಾಗ ಟಂಡನ್ ಹೇಳಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ ಟಂಡನ್, ರೇಷ್ಮೆ ಸಲ್ವಾರ್ ಕುರ್ತಾ ಧರಿಸಿ, ಸುಂದರ ಹಾರವನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments