ಫೋರ್ಬ್ಸ್ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 12ನೇ ಸ್ಥಾನ

ಅಮೇರಿಕಾದ ಫೋರ್ಬ್ಸ್ ಎಂಬ ಮ್ಯಾಗಜಿನ್ 2025ನೇ ವರ್ಷದ ಬಲಿಷ್ಠ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತವು 12ನೇ ಸ್ಥಾನವನ್ನು ಪಡೆದುಕೊಂಡಿದೆ.




ದೇಶದ ಆರ್ಥಿಕ ಪರಿಸ್ಥಿತಿ, ಅಂತಾರಾಷ್ಟ್ರೀಯ ಮತ್ತು ವ್ಯೂಹಾತ್ಮಕ ಸಂಬಂಧ, ಸೇನಾ ಸಾಮಾರ್ಥ್ಯ ಮೊದಲಾದ ಅಂಶಗಳನ್ನು ಆಧಾರದಲ್ಲಿಟ್ಟುಕೊಂಡು ಫೋರ್ಬ್ಸ್ ಮ್ಯಾಗಜೀನ್ ಈ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಅಮೆರಿಕವು 2642 ಲಕ್ಷ ಕೋಟಿ ರೂಪಾಯಿ ಜಿಡಿಪಿಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಚೀನಾ, ರಷ್ಯಾ, ಬ್ರಿಟನ್, ಜರ್ಮನಿ, ದಕ್ಷಿಣ ಕೊರಿಯಾ, ಫ್ರಾನ್ಸ್, ಜಪಾನ್, ಸೌದಿ, ಇಸ್ರೇಲ್ ನಂತರದ ಸ್ಥಾನದಲ್ಲಿದೆ. ಕಳೆದ ವರ್ಷದಂತೆ ಭಾರತ ಈ ಬಾರಿಯೂ 12ನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದು, ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ  ಅಮೆರಿಕ, ಚೀನಾ, ಜರ್ಮನಿ, ಜಪಾನ್ ದೇಶಗಳ ಬಳಿಕ ಭಾರತವು 5ನೇ ಸ್ಥಾನದಲ್ಲಿದೆ.



Post a Comment

0 Comments