ರೈಲ್ವೇ ಸಂಬಂಧಿ ಸೇವೆಗಳಿಗೆ ಇನ್ನು ಮುಂದೆ ಒಂದೇ ಆ್ಯಪ್ “ಸ್ವರೈಲ್”



ಭಾರತೀಯ ರೈಲ್ವೆ ಸಚಿವಾಲಯವು ದೇಶದಲ್ಲಿ ರೈಲ್ವೆ ಸೇವೆಗಾಗಿ ಸ್ವರೈಲ್ ಎಂಬ ಹೊಚ್ಚಹೊಸ ಸೂಪರ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಈ ಆ್ಯಪ್ ಮೂಲಕ ಕಾಯ್ದಿರಿಸಿದ ಟಿಕೆಟ್ ಬುಕಿಂಗ್, ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಕಾದ ಆಹಾರಗಳನ್ನು ಆರ್ಡರ್ ಮಾಡುವುದು ಮತ್ತು ಪಿ.ಎನ್.ಆರ್ ವಿಚಾರಣೆಗಳಂತಹ ಸಾರ್ವಜನಿಕ ಸೇವೆಗಳನ್ನು ನೀಡಬಹುದಾಗಿದೆ. 


ಪ್ರಸ್ತುತ ಬೀಟಾದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ಗಳಿಗೆ‌‌ ಲಭ್ಯವಿರುವ ಸ್ವರೈಲ್ ಸೂಪರ್ ಅಪ್ಲಿಕೇಶನ್ ಫೋನ್ನಲ್ಲಿ ರೈಲ್ವೆ ಸೇವೆಗಳನ್ನು ನಿರ್ವಹಿಸಲು ಅನೇಕ ಅಪ್ಲಿಕೇಶನ್ಗಳು ಇವೆ. ಪ್ರಯಾಣಿಕರು ರೈಲ್ವೆ ಸೇವೆಗಾಗಿ ಬೇರೆ ಬೇರೆ ಅಪ್ಲಿಕೇಶನ್ಗಳನ್ನು ಬಳಸುವ ಅನಿವಾರ್ಯತೆ ಇತ್ತು. ಇದರಿಂದ ಪ್ರಯಾಣಿಕರಿಗೆ ಹಲವಾರು ಗೊಂದಲಗಳು ಎದುರಾಗುತ್ತಿದ್ದವು. ಆದರೆ ಇದೀಗ ಈ ಸ್ವರೈಲ್ ಆಪ್ ಮೂಲಕ ಪ್ರಯಾಣಿಕರಲ್ಲಿನ ಹಲವು ಗೊಂದಲಗಳಿಗೆ ತೆರೆ ಬೀಳಲಿದೆ. 

*ಸ್ವರೈಲ್ ಆ್ಯಪ್ ವೈಶಿಷ್ಟ್ಯಗಳೇನು?*

ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (ಸಿ.ಆರ್.ಐ.ಎಸ್) ಸ್ವರೈಲ್ ಸೂಪರ್ ಆಪ್ ಅನ್ನು ಹೊಸದಾಗಿ ಅಭಿವೃದ್ಧಿ ಪಡಿಸಿದೆ. ಈ ಆಪ್ ಒನ್-ಸ್ಟಾಪ್ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. 

1. ಭಾರತೀಯ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಅಪ್ಲಿಕೇಶನ್ಗಳನ್ನು ಈ ಆ್ಯಪ್ ಒಂದೇ ಕಡೆ ಸಂಯೋಜಿಸುತ್ತದೆ.

2. ಸ್ವರೈಲ್ ಸೂಪರ್ ಅಪ್ಲಿಕೇಶನ್ ಮೂಲಕ ಭಾರತದ ಬಳಕೆದಾರರು ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಕಾಯ್ದಿರಿಸಬಹುದು.

3. ಪ್ರಯಾಣಿಕರು ತಮ್ಮ ಪಾರ್ಸೆಲ್ ಮತ್ತು ಸರಕು ವಿತರಣೆಯ ಬಗ್ಗೆ ಈ ಅಪ್ಲಿಕೇಶನ್ ಮೂಲಕ ವಿಚಾರಿಸಬಹುದಾಗಿದೆ.

4. ರೈಲು ಮತ್ತು ಪಿಎನ್ಆರ್ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಈ ಆಪ್ ಉಪಯುಕ್ತವಾಗುತ್ತದೆ. 

5. ರೈಲುಗಳಲ್ಲಿ ಪ್ರಯಾಣಿಕರು ತಮಗೆ ಬೇಕಾದ ಆಹಾರವನ್ನು ಈ ಆಪ್ ಮೂಲಕ ಆರ್ಡರ್ ಮಾಡಬಹುದು. 

6. ಪ್ರಯಾಣಿಕರು ತಮ್ಮ ದೂರುಗಳು ಮತ್ತು ಪ್ರಶ್ನೆಗಳಿಗಾಗಿ ರೈಲ್ ಮದದ್ ಅನ್ನು ಸಂಪರ್ಕಿಸಬಹುದಾಗಿದೆ.

ಪ್ರಸ್ತುತ, ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್, ರೈಲು ಸಂಚಾರ ಮತ್ತು ವೇಳಾಪಟ್ಟಿಗಳ ಬಗ್ಗೆ ಮಾಹಿತಿ ಪಡೆಯಲು ಬೇರೆ ಬೇರೆ ಅಪ್ಲಿಕೇಶನ್ಗಳನ್ನು ಬಳಸುವ ಅನಿವಾರ್ಯತೆ ಇತ್ತು ಆದರೆ ಈಗ ಸ್ವರೈಲ್ ಸೂಪರ್ ಅಪ್ಲಿಕೇಶನ್ ಏಕೀಕೃತ ವೇದಿಕೆಯಾಗಿದ್ದು, ಹೆಚ್ಚಿನ ಅನುಕೂಲಕ್ಕಾಗಿ ಮೊಬೈಲ್ ಮೂಲಕ ನೇರವಾಗಿ ಮಾಹಿತಿಗಳನ್ನು ತಿಳಿಯಬಹುದ ಇದರ ಏಕೀಕರಣವು ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ.

Post a Comment

0 Comments