ಸೆಬಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ನೇಮಕ

ಭಾರತೀಯರ ಶೇರುಪೇಟೆ ನಿಯಂತ್ರಣ ಮಂಡಳಿ ಅಥವಾ ಸೆಬಿ ಇದರ ಮುಖ್ಯಸ್ಥರನ್ನಾಗಿ ಹಿರಿಯ ಅಧಿಕಾರಿ ಹಾಗೂ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಕೇಂದ್ರ ಸರಕಾರವು ಗುರುವಾರ ಈ ನೇಮಕವನ್ನು ಮಾಡಿದ್ದು, ತುಹಿನ್ ಪಾಂಡೆ ಅವರು ಸೆಬಿಯ 11ನೇ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರ ಅಧಿಕಾರವಧಿ ಮೂರು ವರ್ಷ ಇರಲಿದೆ. ಒಡಿಶಾ ಕೇಡರ್ ನ 1987ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಸೆಬಿ ಹಾಲಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ಅಧಿಕಾರವಧಿ ಇಂದಿಗೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತುಹಿನ್ ಪಾಂಡೆಯವರನ್ನು ಸೆಬಿ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.

Post a Comment

0 Comments