ದೇಶದ ಅತ್ಯಂತ ದೊಡ್ಡ ಗ್ರೀನ್ ಫೀಲ್ಡ್ ಕಾರ್ಗೊ ಟರ್ಮಿನಲ್ ಆರಂಭ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅತಿ ದೊಡ್ಡ 'ಗ್ರೀನ್ ಫೀಲ್ಡ್ ಕಾರ್ಗೋ ಟರ್ಮಿನಲ್' ಕಾರ್ಯಾಂಬವನ್ನು ಮಾಡಿದೆ. ನೂತನ ಕಾರ್ಗೋ ಟರ್ಮಿನಲ್ 2.45 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದು, 3.60 ಲಕ್ಷ ಮೆಟ್ರಿಕ್ ಟನ್ ನಿರ್ವಹಣಾ ಸಾಮರ್ಥ್ಯ ಹೊಂದಿದೆ. 42 ಬೃಹತ್ ಟ್ರಕ್ ಗಳು, 400 ಕ್ಕೂ ಹೆಚ್ಚು ಕಾರ್ಗೋ ಬೋಗಿಗಳು ಸಂಚರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ವಾಯುಯಾನ ಸರಕು ಸಾಗಣೆ ಕ್ಷೇತ್ರದ ಸಂಸ್ಥೆಯ ಮೆನ್ಜೀಸ್ ಸಹಯೋಗದಲ್ಲಿ ನೂತನ ಕಾರ್ಗೋ ಟರ್ಮಿನಲ್ ನಿರ್ಮಾಣವಾಗಿದೆ.
ನೂತನ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಸರಕುಗಳನ್ನು ಪರೀಕ್ಷಿಸಲು ಎಕ್ಸ್-ರೇ ಯಂತ್ರ ಅಳವಡಿಸಲಾಗಿದೆ. ಸರಕುಗಳನ್ನು ವಿಮಾನಕ್ಕೆ ಸಾಗಿಸುವ ಮೊದಲು ನಿರ್ವಹಣೆ ಮಾಡಲು 30 ಯು.ಎಲ್.ಡಿ, ನೈಜ ಸಮಯದಲ್ಲಿ ಸರಕುಗಳ ದತ್ತಾಂಶವನ್ನು ಸಂಗ್ರಹಿಸಲು 40 ಹ್ಯಾಂಡ್ ಹೆಲ್ಡ್ ಟರ್ಮಿನಲ್ ಸಾಧನಗಳು, ಏಜೆಂಟರಿಗೆ ಸ್ವಯಂಸೇವಾ ಕಿಯೋಸ್ಕ್ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಸಂಪೂರ್ಣ ದೇಶಿಯವಾಗಿ ನಿರ್ಮಿಸಿರುವ ನೂತನ ತಾರ್ಕೋಟರ್ಮಿನಲ್ ಭಾರತೀಯ ಹಸಿರು ಕಟ್ಟಡ ಮಂಡಳಿಯ ಮಾನದಂಡ ಗಳಿಗೆ ಅನುಗುಣವಾಗಿ ನಿರ್ಮಿತವಾಗಿದೆ. ಸ್ಕೈ ಲೈಟಿಂಗ್, ಸುಧಾರಿತ ವಾತಾಯನ ವ್ಯವಸ್ಥೆ, ನೀರು ಸಂರಕ್ಷಣಾ ಕ್ರಮಗಳು, ಸಮರ್ಥ ಇಂಧನ ಬಳಕೆ ಮೂಲಸೌಕರ್ಯಗಳನ್ನು ಅಳವಡಿಸಲಾಗಿದೆ ಎಂದು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0 Comments