ಇಂದು ರಾತ್ರಿ ಸೌರವ್ಯೂಹದ 7 ಗ್ರಹಗಳು ಒಂದೇ ಸಾ‌ಲಿನಲ್ಲಿ ಗೋಚರ..!!

ಫೆಬ್ರವರಿ 28ನೇ ತಾರೀಖು ಕೇವಲ ರಾಷ್ಟ್ರೀಯ ವಿಜ್ಞಾನ ದಿನ ಮಾತ್ರವಲ್ಲ. ಅಮಾವಾಸ್ಯೆಯ ಈ ದಿನ ರಾತ್ರಿ ಸೌರವ್ಯೂಹದ ಏಳು ಗ್ರಹಗಳು ಒಂದೇ ಸಾ‌ಲಿನಲ್ಲಿ ಗೋಚರಿಸಲಿವೆಯಂತೆ..!! "ಗ್ರಹ ಮೆರವಣಿಗೆ" ಎಂದು ಕರೆಯಲ್ಪಡುವ ಅಪರೂಪದ ಖಗೋಳ ವಿದ್ಯಾಮಾನವೊಂದು ಆಗಸದಲ್ಲಿ ಇಂದು ಘಟಿಸಿದೆ. ಭಾರತದಿಂದ ಸೌರವ್ಯೂಹದ ಎಲ್ಲಾ ಏಳು ಗ್ರಹಗಳು ಕಾಣಿಸಲಿದ್ದು, ಇವು ಒಂದೇ ಸಾಲಿನಲ್ಲಿ ಜೋಡಿಸಿಕೊಳ್ಳಲಿವೆ.
ಕಳೆದ ಜನವರಿ ತಿಂಗಳಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚುನ್ ಗ್ರಹಗಳ ಗೋಚರತೆ ಆರಂಭವಾಯಿತು. ಆದರೆ ಇಂದು ಈ ಗ್ರಹಗಳ ಸಾಲಿಗೆ ಬುಧ ಗ್ರಹವು ಸೇರಿಕೊಳ್ಳಲಿದ್ದು, ಫೆಬ್ರವರಿ 28ರ ಈ ದಿನ ರಾತ್ರಿ ಎಲ್ಲಾ ಏಳು ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಜೋಡಿಸಲ್ಪಡುತ್ತವೆ. ಶುಕ್ರವಾರ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಆದರೆ ಯುರೇನಸ್ ಮತ್ತು ನೆಪ್ಚ್ಯೂನ್ ಗ್ರಹಗಳು ಮಂಕಾಗಿರುವುದರಿಂದ ಬೈನಾಕುಲರ್ ಅಗತ್ಯವಿದೆ. ಸೂರ್ಯಸ್ತದ ನಂತರ ಅಥವಾ ಸೂರ್ಯೋದಯದ ಮೊದಲು ವೀಕ್ಷಣೆಗೆ ಉತ್ತಮ ಸಮಯ. 2040 ರವರೆಗೆ ಇನ್ನೂ ಈ ವಿದ್ಯಮಾನ ನಟಿಸುವುದಿಲ್ಲ. ಕರ್ನಾಟಕ ಸೇರಿ ಭಾರತದ ಅತ್ಯಂತ ಈ ಗ್ರಹಗಳ ಮೆರವಣಿಗೆ ಗೋಚರಿಸಲಿದೆ. ಸ್ವಚ್ಛವಾದ ಆಕಾಶ ಹೊಂದಿರುವ ದೆಹಲಿ, ಮುಂಬೈ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಕಲಬುರ್ಗಿ, ಹಾವೇರಿ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಪುಣೆ ಜೈಪುರ, ಲಕ್ನೋ, ಅಹಮದಾಬಾದ್, ಈಶಾನ್ಯ ರಾಜ್ಯಗಳ ನಿವಾಸಿಗಳು ಈ ಅಪರೂಪದ ಘಟನೆಯನ್ನು ವೀಕ್ಷಿಸಲು ಉತ್ತಮ ಅವಕಾಶ ಹೊಂದಿದ್ದಾರೆ.


Post a Comment

0 Comments