ಚೈನ್ ಹಿಡಿದು ಭೂಮಿ ಅಳೆಯಲು ಸರ್ವೆಯರ್ ಜೊತೆಗೆ ಇಬ್ಬರು ಸಹಾಯಕರು ಕೆಲಸ ಮಾಡಬೇಕಿತ್ತು. ಅಷ್ಟೇ ಅಲ್ಲದೆ ಭೂ ಸರ್ವೇ ಮಾಡಲು ಕನಿಷ್ಠ 70 ನಿಮಿಷ ಬೇಕಾಗಿದ್ದು, ನಕ್ಷೆ ತಯಾರಿಸಲು ಮೂರು ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಆಧುನಿಕ ತಂತ್ರಜ್ಞಾನ ಆಧರಿತ ರೋವರ್ ಈ ಸರ್ವೇ ಕೆಲಸವನ್ನು ಕೇವಲ ಹತ್ತು ನಿಮಿಷದಲ್ಲಿ ಮುಗಿಸುತ್ತದೆ.
ಕರ್ನಾಟಕದಲ್ಲಿ 1,830 ರಿಂದ 1,870ರವರೆಗೆ ಮಾತ್ರ ಸರ್ವೆ ಕೆಲಸವಾಗಿದೆ.1967ರಲ್ಲಿ ಅಲ್ಪಸ್ವಲ್ಪ ಪುನರ್ ಸರ್ವೇ ನಡೆದಿದೆ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ಸರ್ವೆ ಕಾರ್ಯ ಇನ್ನೂ ಮುಗಿದಿಲ್ಲ. ಅನಾದಿ ಕಾಲದಿಂದಲೂ ಬಳಸುತ್ತಿದ್ದ ಚೈನ್ ವ್ಯವಸ್ಥೆ ಈಗಲೂ ಮುಂದುವರೆಯುತ್ತಿದೆ. ಈ ಚೈನ್ ಸರ್ವೆ ವ್ಯವಸ್ಥೆಯಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬದಲಾವಣೆ ಮಾಡಬಹುದಾಗಿದೆ. ಇದರಿಂದಾಗಿ ಹಲವು ಜನರು ಇಂದಿಗೂ ಕೋರ್ಟ್ ಕಚೇರಿ ಎಂದು ಅಲೆದಾಡುತ್ತಿರುತ್ತಾರೆ. ಆದರೆ ರೋವರ್ ಸರ್ವೆಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದವಿರುವುದಿಲ್ಲ.
ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಭೂಮಾಪಕರಿಗೂ ರೋವರ್ ನೀಡಲು ಸುಮಾರು 5000 ಗಳನ್ನು ಹಂತ ಹಂತವಾಗಿ ಖರೀದಿಸಲಾಗುವುದು ಎಂದು ಕಂದಾಯ ಇಲಾಖೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಬಹು ಮಾಲೀಕತ್ವ ಉಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿಯೊಬ್ಬ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಪಹಣಿ ವಿತರಿಸಲಾಗುತ್ತಿದೆ. ಈಗಾಗಲೇ 16,630 ಗ್ರಾಮಗಳ ಅಳತೆ ಕಾರ್ಯ ಪೂರ್ಣಗೊಂಡಿದೆ ಎಂದು ವಿವರಣೆ ನೀಡಿದ್ದಾರೆ.
ಪೋಡಿ ಮುಕ್ತ ಗ್ರಾಮ ಅಭಿಯಾನ 2.0 ಅಡಿ ಬಹುಮಾಲಿಕತ್ವ ಪಹಣಿಗಳಲ್ಲಿನ ಖಾಸಗಿ ಜಮೀನಿನ ಪೋಡಿ ದುರಸ್ತಿಯನ್ನು ಪ್ರಸ್ತುತ ಮೋಜಿಣಿ ತಂತ್ರಾಂಶದ ಮೂಲಕ 6,925 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, 573 ಗ್ರಾಮಗಳಲ್ಲಿ ಪೂರ್ಣಗೊಳಿಸಲಾಗಿದೆ. ರಾಜ್ಯದಲ್ಲಿ ಡ್ರೋನ್ ಮೂಲಕ ಸರ್ವೆ ಮಾಡುತ್ತಿದ್ದು 21 ಜಿಲ್ಲೆಯ 21710 ಗ್ರಾಮ ಪೂರ್ಣಗೊಂಡಿವೆ. ಜಮೀನುಗಳಿಗೆ ಹದ್ದುಬಸ್ತು ಮಾಡಲು 120 ರಿಂದ 180 ದಿನವಾಗುತ್ತಿತ್ತು. ಈಗ 45 ದಿನದಲ್ಲಿ ಮಾಡಲಾಗುತ್ತಿದೆ ಎಂದು ಮಾಹಿತಿಯಲ್ಲಿ
ತಿಳಿಸಿದ್ದಾರೆ.
0 Comments