ಆರ್.ಆರ್.ಐ ಗ್ರಂಥಾಲಯದಲ್ಲಿ ಉದ್ಯೋಗಾವಕಾಶ


ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ (ಆರ್.ಆರ್.ಐ) ಬೆಂಗಳೂರಿನಲ್ಲಿ ಲೈಬ್ರರಿ ಹುದ್ದೆ ಖಾಲಿ ಇದ್ದು, ಈ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 
1.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ, ಎಂ.ಎಲ್.ಐ.ಎಸ್.ಸಿ ಯನ್ನು ಕನಿಷ್ಠ ಶೇಕಡ 60 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. 
2. ಅಭ್ಯರ್ಥಿಯು 2023, 2024 ವರ್ಷದಲ್ಲಿ ಎಮ್ಎಲ್ಐಎಸ್‌ಸಿ ಉತ್ತೀರ್ಣರಾಗಿರಬೇಕು.
3. ಅರ್ಜಿ ಸಲ್ಲಿಸುವವರು 3.3.2025ಕ್ಕೆ ಅನ್ವಯವಾಗುವಂತೆ 30 ವರ್ಷ ವಯಸ್ಸಿನೊಳಗಿನವರಾಗಿರಬೇಕು.
4. ಸಂಸ್ಥೆಯ ನಿಯಮಾನುಸಾರವಾಗಿ ವಯೋಸ್ ಆಡಿಲಿಕ್ಕೆ ಅನ್ವಯವಾಗುತ್ತದೆ. 

ಅಭ್ಯರ್ಥಿಗಳು ಈ ಹುದ್ದೆಗೆ ಸಲ್ಲಿಸಿದ ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡುವ ಮೂಲಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ 31,000 ರೂಪಾಯಿ ವೇತನವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಮಾರ್ಚ್ 3.ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ rri.res.in ಹಾಗೂ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆಗಾಗಿ https://bit.ly/4159EG8 ಪರಿಶೀಲಿಸಬಹುದಾಗಿದೆ.

Post a Comment

0 Comments