ಜೆ.ಎನ್. ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್ಶಿಪ್


ಜೆ.ಎನ್. ಟಾಟಾ ಎಂಡೋಮೆಂಟ್, ಸಾಗರೋತ್ತರ ಉನ್ನತ ಶಿಕ್ಷಣ ಅಧ್ಯಯನ ನಡೆಸಲು ಯೋಜಿಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ಲೋನ್ ಸ್ಕಾಲರ್ಶಿಪ್ ಅರ್ಜಿಗಳನ್ನು ನೀಡುತ್ತಿದೆ. ಲೋನ್ ಸ್ಕಾಲರ್ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಬಂಧಪಟ್ಟ ಟ್ರಸ್ಟಿನ ಟ್ರಸ್ಟಿಗಳ ಸ್ವವಿವೇಚನೆಯಿಂದ ತಮ್ಮ ಸಾಗರೋತ್ತರ ಅಧ್ಯಯನದಲ್ಲಿ ಅವರ ಶೈಕ್ಷಣಿಕ ಸಾಧನೆಗೆ ಜೋಡಿಸಲಾದ ಭಾಗಶಃ ‘ಪ್ರಯಾಣಭತ್ಯೆ’ ಮತ್ತು ‘ಗಿಫ್ಟ್ ಅವಾರ್ಡ್’ಗೆ ಶಿಫಾರಸ್ಸು ಮಾಡಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
1. ಕನಿಷ್ಠ ಒಂದು ಅಂಡರ್ ಗ್ರಾಜುಯೇಟ್ ಪದವಿಯನ್ನು ಪೂರ್ಣಗೊಳಿಸಿರುವ ಅಥವಾ ಭಾರತದ ಯಾವುದೇ ಮಾನ್ಯ ವಿಶ್ವವಿದ್ಯಾಲಯ ಅಥವಾ ಕಾಲೇಜು ಅಥವಾ ಸಂಸ್ಥೆಯಲ್ಲಿ ಯಾವುದೇ ಅಂಡರ್ ಗ್ರ್ಯಾಜುಯೇಟ್ ಕಾರ್ಯಕ್ರಮದ ಕೊನೆಯ ವರ್ಷದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಿದೆ.

2. ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ/ ಡಾಕ್ಟರಲ್/ ಪೋಸ್ಟ್ ಡಾಕ್ಟರಲ್ ಅಧ್ಯಯನವನ್ನು ಮುಂದುವರಿಸುವ ಇಚ್ಛೆ ಉಳ್ಳವರಾಗಿರಬೇಕು.

3. ಅಭ್ಯರ್ಥಿಗಳು ದಾಖಲಾಗಿರುವ ಕೋರ್ಸುಗಳು ಗ್ರಾಜುಯೇಟ್ ಪ್ರೋಗ್ರಾಮ್ (ಭಾರತೀಯ ಪರಿಭಾಷೆಯಲ್ಲಿ ಪೋಸ್ಟ್-ಗ್ರಾಜುಯೇಟ್ ಪ್ರೋಗ್ರಾಮ್) ಎಂದು ಮಾನ್ಯವಾದವು ಆಗಿರಬೇಕು.

4. ಈ ಹಿಂದಿನ ವರ್ಷ/ಈ ಮೊದಲು ಜೆ.ಎನ್. ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್ಶಿಪ್‌ ಗೆ ಆಯ್ಕೆಯಾಗಿರದ ಅಭ್ಯರ್ಥಿಗಳು ಮತ್ತು ತಾವು ಆಯ್ಕೆಯಾಗಿದ್ದರೂ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಹರಾಗಿರದ ಅಭ್ಯರ್ಥಿಗಳಿಗೂ ಹೊಸ ಅರ್ಜಿ ಸಲ್ಲಿಸುವ ಅವಕಾಶವಿದೆ.

5. ಈಗಾಗಲೇ ಸಾಗರೋತ್ತರ ಪೋಸ್ಟ್ ಗ್ರಾಜುಯೇಟ್ ಅಧ್ಯಯನ ನಡೆಸುತ್ತಿರುವ, ತಮ್ಮ ಒಂದನೇ ವರ್ಷದ ಕೊನೆಯಲ್ಲಿರುವ ಅಥವಾ ಎರಡನೇ ವರ್ಷದ ಪ್ರಾರಂಭದಲ್ಲಿರುವಂತಹ, ಲೋನ್ ಸ್ಕಾಲರ್ಶಿಪ್ ನೀಡುವ ಸಮಯದಲ್ಲಿ ಸಾಮಾನ್ಯವಾಗಿ ಯಾವುದೇ ಕ್ಯಾಲೆಂಡರ್ ವರ್ಷದ ಜುಲೈ ಅಲ್ಲಿ ಕನಿಷ್ಠ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ (12 ತಿಂಗಳು) ಪೂರ್ಣಗೊಳ್ಳಲು ಬಾಕಿ ಉಳಿದಿರುವಂತಹ ಅರ್ಜಿದಾರರು ಅರ್ಹರಾಗಿರುತ್ತಾರೆ.

6. ಆರ್ಚಿದಾರರು ತಮ್ಮ ಅಂಡರ್ ಗ್ರಾಜುಯೇಟ್ ಅಥವಾ ಪೋಸ್ಟ್ ಗ್ರಾಜುಯೇಟ್ ಅಧ್ಯಯನದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.

7. ಅಭ್ಯರ್ಥಿಗಳು 2025ರ ಜೂನ್ 30ಕ್ಕೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಿನವರಾಗಿರಬಾರದು.

8. ರೂ.10 ಲಕ್ಷದವರೆಗಿನ ಲೋನ್ ಸ್ಕಾಲರ್ಶಿಪ್ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ 07.03.2025 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ www.b4s.in/saka/JNT9 ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.

Post a Comment

0 Comments