ಕೇಂದ್ರ ಸರಕಾರದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬಳಸುವ ಮಧ್ಯಮ ವರ್ಗ ಹಾಗೂ ಖಾಸಗಿ ಕಾರು ಮಾಲೀಕರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಾಗ ಪ್ರಯಾಣಿಸುತ್ತಾ ಅನಿಯಮಿತವಾಗಿ ಟೋಲ್ ಬಳಸುವವರು ಇನ್ನು ಮುಂದೆ ಮಾಸಿಕವಾಗಿ 340ರೂ ಪಾಸ್ ಬಳಸುವ ಬದಲು 3000 ರೂಂ. ಕೊಟ್ಟು ವಾರ್ಷಿಕ ಟೋಲ್ ಪಾಸ್ ಪಡೆಯಬಹುದು ಅಥವಾ ಒಂದು ಬಾರಿ ರೂ. 30,000 ಪಾವತಿಸುವ ಮೂಲಕ 15 ವರ್ಷಗಳವರೆಗೆ ಲೆಕ್ಕವಿಲ್ಲದಷ್ಟು ಬಾರಿ ಟೋಲ್ ಬಳಸಲು ಜೀವಾವಧಿ ಪಾಸ್ ಖರೀದಿಸಬಹುದಾಗಿದೆ ಈ ಪ್ರಸ್ತಾವಗಳನ್ನು ಜಾರಿಗೆ ತರುವ ದಿಸೆಯಲ್ಲಿ ಸಾರಿಗೆ ಸಚಿವಾಲಯವು ಕ್ರಮ ಕೈಗೊಳ್ಳುತ್ತಿದೆ.
ಪ್ರಸ್ತುತ ಮಾಸಿಕ ಟೋಲ್ ಪಾಸ್ ದರ 340 ಇದ್ದು ವಾರ್ಷಿಕ ದರ 4, 080ರೂ. ಆಗುತ್ತದೆ. ಸರಕಾರದ ಈ ಹೊಸ ಕ್ರಮದಿಂದ ಪ್ರಯಾಣಿಕರಿಗೆ ಲಾಭದೊಂದಿಗೆ ಆಗಾಗ ಟೋಲ್ ಪಾಸ್ ಪಡೆಯುವ ತಲೆನೋವು ತಪ್ಪಿದಂತಾಗುತ್ತದೆ.
0 Comments