ಇಯರ್ ಫೋನ್ನಂತಹ ಸಾಧನೆಗಳ ಯತೇಚ್ಛ ಬಳಕೆಯಿಂದ ಉಂಟಾಗುತ್ತಿರುವ ಶ್ರವಣದೋಷಗಳ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಇಲಾಖೆ ದೀರ್ಘಕಾಲದ ಈ ಸಾಧನಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದೆ. "ಆಡಿಯೋ ಸಾಧನಗಳ ಬಳಕೆ ಯುವಕರಲ್ಲಿ ಅತಿಯಾಗಿದೆ. 50 ಡಿಸಿಬಲ್ ಗಳಿಗೆ ಹಾಗೂ ದಿನಕ್ಕೆ ಎರಡು ಗಂಟೆ ಮೀರದಂತೆ ಈ ಸಾಧನಗಳನ್ನು ಬಳಸಬೇಕು. ಬಳಸುವಾಗ ಆಗಾಗ ವಿರಾಮ ತೆಗೆದುಕೊಳ್ಳಬೇಕು. ಮಕ್ಕಳು ನಿರಂತರವಾಗಿ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.
0 Comments