ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ



ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ ಸ್ವ ಉದ್ಯೋಗಾಕಾಂಕ್ಷಿಗಳಿಗಾಗಿ ನಾನಾ ರೀತಿಯ ಉಚಿತ ತರಬೇತಿಗಳನ್ನು ಊಟ, ವಸತಿಯೊಂದಿಗೆ ಕೊಡಲಾಗುತ್ತದೆ. ಆಸಕ್ತರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ತಮ್ಮದೇ ಆದ ಸ್ವ ಉದ್ಯೋಗ ಆರಂಭಿಸಿ ಬದುಕು ಕಟ್ಟಿಕೊಳ್ಳಬಹುದಾಗಿದೆ. ಈ ಬಾರಿ ಪುರುಷರಿಗಾಗಿ  ಈ ಕೆಳಗಿನ ತರಬೇತಿಯನ್ನು ಆಯೋಜಿಸಲಾಗಿದೆ.         
ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ (ತ್ರೀ ಫೇಸ್,  ಸಿಂಗಲ್ ಫೇಸ್ ಇಂಡಕ್ಷನ್ ಮೋಟರ್ ಮತ್ತು ಸಬ್ಮರ್ಸಿಬಲ್ ಮೋಟರ್ ವೈಂಡಿಂಗ್, ಗೃಹೋಪಯೋಗಿ ಉಪಕರಣ ರಿಪೇರಿ ಮತ್ತು ಎಲ್ಲಾ ತರದ  ಸ್ಟಾರ್ಟರ್ಸ್ ರಿಪೇರಿ ಮತ್ತು ಸರ್ವಿಸ್ )  ತರಬೇತಿಯನ್ನು ಆಯೋಜಿಸಿದ್ದು ದಿನಾಂಕ: 05.03.2025 ರಿಂದ 03.04.2025ರ ವರೆಗೆ (30ದಿನ) ತರಬೇತಿ ನಡೆಯುತ್ತದೆ. ಯಾವುದೇ ಊರಿನವರಾದರೂ ಇಲ್ಲಿ ತರಬೇತಿ ಪಡೆದುಕೊಳ್ಳಬಹುದಾಗಿದೆ.

ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು, 18-45 ವರ್ಷದ ಒಳಗಿನವರಿಗೆ ಮಾತ್ರ  ಅವಕಾಶವಿರುತ್ತದೆ. ಭಾಗವಹಿಸಿಸುವವರು ಈ ಕೆಳಗಿನ  ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7
  
 ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ              6364561982, 9980885900, 9448348569, 9591044014, 9902594791 ಹಾಗೂ ಸಂಸ್ಥೆಯ ವೆಬ್‌ ಸೈಟ್‌ನ್ನು ಸಂಪರ್ಕಿಸಿ.
 https://www.rudsetujire.com  
ಸ್ಥಳ: ರುಡ್ ಸೆಟ್ ಸಂಸ್ಥೆ ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ, 
Training center Location : https://maps.app.goo.gl/iQhbzzA9k3CrMuAv6

Post a Comment

0 Comments