ಇಂಟರ್ನೆಟ್ ವೇಗದಲ್ಲಿ ಭಾರತಕ್ಕೆ ನಂ.1 ಸ್ಥಾನ

ಜಗತ್ತು ಇಂದು ಇಂಟರ್ನೆಟ್ ಎಂಬ ಮಾಯಾ ಜಾಲದಲ್ಲಿ ಉಸಿರಾಡುತ್ತಿದೆ. ಇಂಟರ್ನೆಟ್ ಇಲ್ಲದೆ ಕೈಕಾಲು ಅಲ್ಲಾಡದ ಪರಿಸ್ಥಿತಿ ಬಂದೊದಗಿದೆ. ಈ ಇಂಟರ್ನೆಟ್ ಬಳಕೆಯಲ್ಲಿ ಭಾರತದ ಸ್ಥಾನವು ಉತ್ತುಂಗದಲ್ಲಿದೆ. ಭಾರತವು 5ಜಿ ಇಂಟರ್ನೆಟ್ ಡೌನ್ಲೋಡ್ ವೇಗದಲ್ಲಿ ಮುಂದಿದ್ದು, ಸರಾಸರಿ ವೇಗ 260.71 ಎಂಬಿಪಿಎಸ್ ನಷ್ಟಿದೆ.
ಅದೇ ರೀತಿ ಚೀನಾದಲ್ಲಿ 224.82 ಎಂಬಿಪಿಎಸ್ ಮತ್ತು ಜಪಾನ್ ನಲ್ಲಿ 254.18 ಎಂಬಿಪಿಎಸ್ ಯುರೋಪ್ನಲ್ಲಿ ರೂ.221.17 ಎಂ ಬಿಪಿಎಸ್ ವೇಗ ಇದೆ. ಓಂಡಿಯಾ ಮತ್ತು ಊಕ್ಲಾ ಸಂಸ್ಥೆಗಳು ನಡೆಸಿರುವ ಜಂಟಿ ಸಮೀಕ್ಷೆಯ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಇದಲ್ಲದೆ, 5ಜಿ ಸ್ಟ್ಯಾಂಡ್ ಅಲೋನ್ ನೆಟ್ವರ್ಕ್ ರೋಲ್ ಔಟ್ ನಲ್ಲಿ ಅಮೇರಿಕಾ ಮತ್ತು ಯುರೋಪನ್ನು ಭಾರತ ಹಿಂದಿಕ್ಕಿದೆ. ಚೀನಾ ಶೇಕಡಾ 80ರಷ್ಟು ಲಭ್ಯತೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಭಾರತ ಶೇಕಡ 52ರಷ್ಟು ಲಭ್ಯತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಶೇಕಡಾ 24, ಯುರೋಪ್ನಲ್ಲಿ ಶೇಕಡ 2 ಮಾತ್ರ ಇದೆ. ಭಾರತದಲ್ಲಿ ರಿಲಯನ್ಸ್, ಜಿಯೋದ ಜಾಲ ವಿಸ್ತರಣೆ, 700 ಮೆಕಹರ್ಟ್ಜ್ ಸ್ಪೆಕ್ಟ್ರಮ್ ನ ಬಳಕೆ 5ಜಿ ಲಭ್ಯತೆ ಹೆಚ್ಚುವುದಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Post a Comment

0 Comments