ಈ ಮಹತ್ವದ ನಿರ್ಧಾರದ ಕುರಿತಾಗಿ 2024ರ ಡಿಸೆಂಬರ್ ತಿಂಗಳಲ್ಲೇ ತೀರ್ಮಾನ ಕೈಗೊಂಡಿದ್ದು ಮಿಲಿಟರಿಯ ಆಂತರಿಕ ಸಂವಹನಗಳಲ್ಲಿ ಹೊಸ ಹೆಸರುಗಳನ್ನೇ ಬಳಕೆ ಮಾಡಲಾಗುತ್ತಿದೆ. ಈ ಕುರಿತಾದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಪೂರ್ವ ಕಮಾಂಡ್ ನ ಮರುನಾಮಕರಣದ ವಿಚಾರವನ್ನು ರಕ್ಷಣಾ ಸಚಿವಾಲಯದ (ಕೊಲ್ಕತ್ತಾ) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಂಗ್ ಕಮಾಂಡರ್ ಹಿಮಾಂಶು ತಿವಾರಿ ಬುಧವಾರ ದೃಢಪಡಿಸಿದ್ದು ಡಿಸೆಂಬರ್ 2ನೇ ವಾರದಲ್ಲೇ ಈ ಕುರಿತ ಆದೇಶ ಹೊರಬಿದ್ದಿದೆ ಎಂದಿದ್ದಾರೆ.
0 Comments