ಭಾರತ ಹಾಗೂ ಬ್ರಿಟನ್ ರಾಷ್ಟ್ರಗಳ ನಡುವಿನ ವ್ಯಾವಹಾರಿಕ ಸಂಬಂಧವು ಗಾಢವಾಗಿದ್ದು, ಈ ಬಗೆಗಿನ ಸೇವೆಗಾಗಿ ಟಾಟಾ ಸನ್ಸ್ ಅಧ್ಯಕ್ಷರಾದ ಎನ್ ಚಂದ್ರಶೇಖರನ್ ಅವರಿಗೆ ಬ್ರಿಟನ್ ಸರ್ಕಾರವು ನೈಟ್ ಹುಡ್ ಗೌರವವನ್ನು ಪ್ರಕಟಿಸಿದೆ. ಈ ಬಗ್ಗೆ ಟಾಟಾ ಗ್ರೂಪ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಉಭಯ ದೇಶಗಳ ವ್ಯವಹಾರಿಕ ಸೇವೆಯನ್ನು ಪರಿಗಣಿಸಿ ಬ್ರಿಟಿಷ್ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ “ನೈಟ್ ಹುಡ್” ಗೌರವವನ್ನು ಕಿಂಗ್ ಚಾರ್ಲ್ಸ್ ಚಂದ್ರಶೇಖರನ್ ಅವರಿಗೆ ಘೋಷಣೆ ಮಾಡಲಾಗಿದೆ. ಬ್ರಿಟಿಷ್ ಸರ್ಕಾರದ ಈ ಗೌರವಕ್ಕೆ ಅಪಾರವಾದ ಹೆಮ್ಮೆಯಿದೆ. ಈ ಬಗ್ಗೆ ಟಾಟಾ ಸನ್ಸ್ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಸಂತಸವನ್ನು ವ್ಯಕ್ತಪಡಿಸಿ ಬ್ರಿಟಿಷ್ ಸರ್ಕಾರಕ್ಕೆ ಧನ್ಯವಾದವನ್ನೂ ಸಮರ್ಪಿಸಿದ್ದಾರೆ.
0 Comments