ಉನ್ನತ ಶಿಕ್ಷಣ ದಾಖಲಾತಿ ವರದಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ


ಉನ್ನತ ಶಿಕ್ಷಣ ಸಂಸ್ಥೆಗಳ ದಾಖಲಾತಿ ವರದಿ ಬಿಡುಗಡೆಯಾಗಿದ್ದು ಕರ್ನಾಟಕಕ್ಕೆ ಮುಂಚೂಣಿ ಪಟ್ಟ ಲಭಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಒಟ್ಟು ದಾಖಲಾತಿ ಅನುಪಾತ(ಜಿಇಆರ್)ದಲ್ಲಿ ಕರ್ನಾಟಕ ಈ ಸಾಧನೆ ಮಾಡಿದೆ.
2021-22ನೇ ಸಾಲಿನ ಜಿಇಆರ್ ವರದಿಯಲ್ಲಿ ತಮಿಳುನಾಡು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಕೇರಳ ರಾಜ್ಯಗಳು ಅಗ್ರ ಸಾಧಕ ರಾಜ್ಯಗಳಾಗಿ ಹೊರಹೊಮ್ಮಿವೆ. ರಾಜ್ಯಗಳು ಮತ್ತು ರಾಜ್ಯಗಳ ಸರ್ಕಾರಿ ವಿಶ್ವವಿದ್ಯಾಲಯಗಳ ಮೂಲಕ ಗುಣಮಟ್ಟದ ಉತ್ತಮ ಉನ್ನತ ಶಿಕ್ಷಣವನ್ನು ವಿತರಿಸುವ ವರದಿ ಪ್ರಕಾರ ಛತ್ತೀಸ್ಗಡ, ನಾಗಲ್ಯಾಂಡ್, ಜಾರ್ಖಂಡ್ ಮತ್ತು ಬಿಹಾರಗಳು ಕಳಪೆ ಸಾಧನೆ ಮಾಡಿದ್ದು, ಇವುಗಳನ್ನು ಮಹತ್ವಾಕಾಂಕ್ಷೆಯ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಕರ್ನಾಟಕದೊಂದಿಗೆ ಸಿಕ್ಕಿಂ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶಗಳನ್ನು ಮುಂಚೂಣಿ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಅಷ್ಟೇ ಅಲ್ಲದೆ ತಮಿಳುನಾಡು, ಗೋವಾ ಮತ್ತು ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತವು ಉತ್ತಮವಾಗಿದ್ದು ಜಾರ್ಖಂಡ್ ಮತ್ತು ಬಿಹಾರ ವಿಶ್ವವಿದ್ಯಾಲಯಗಳಲ್ಲಿ ಈ ಅನುಪಾತವು ಕಳಪೆಯಾಗಿದೆ ಎಂದು ವರದಿ ಮಾಡಿದೆ. 

ಕರ್ನಾಟಕ ರಾಜ್ಯವು 66 ಕಾಲೇಜು ಸಾಂದ್ರತೆಯೊಂದಿಗೆ ಅಗ್ರಸ್ಥಾನದಲ್ಲಿದ್ದು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ನಂತರ ತೆಲಂಗಾಣ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳಿವೆ ಎಂದು ಈ ವರದಿ ತಿಳಿಸಿದೆ.

Post a Comment

0 Comments