ಆರ್‌ಬಿಐ ತನ್ನ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರ ಅವರನ್ನು 2024ರ ಡಿಸೆಂಬರಲ್ಲಿ ಆಯ್ಕೆ ಮಾಡಿದ್ದು, ಇದೀಗ ಅವರ ಸಹಿ ಇರುವ 50 ರೂಪಾಯಿಗಳ ಹೊಸ ನೋಟುಗಳನ್ನು ಆರ್‌ಬಿಐ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಮಾಜಿ ಗವರ್ನರ್ ಶಕ್ತಿ ಕಾಂತ್ ದಾಸ್ ಅವರ ಅವಧಿ ಮುಗಿದ ನಂತರ ನೂತನ ಗವರ್ನರ್ ಆಗಿ ನೇಮಕಗೊಂಡಿದ್ದರು. ಇವರ ಅಧಿಕಾರ ಅವಧಿಯಲ್ಲಿ ಅವರ ನೂತನ ಸಹಿ ಇರುವ ನೋಟುಗಳ ಬಿಡುಗಡೆ ಶೀಘ್ರದಲ್ಲೇ ಆಗಲಿದೆ ಎಂದು ಆರ್‌ಬಿಐ ತಿಳಿಸಿದೆ. ರೂ.50 ಮುಖಬೆಲೆಯ ನೋಟಿನಲ್ಲಿ ಕೇವಲ ಹೊಸ ಸಹಿಯಷ್ಟೇ ಇದ್ದು ಗಾಂಧೀಜಿಯವರ ಭಾವಚಿತ್ರ ಸೇರಿದಂತೆ ಮಿಕ್ಕೆಲ್ಲಾ ಅಂಶಗಳು ಹಾಗೆಯೇ ಇರಲಿದೆ. ಹಾಗೆಯೇ ಬೇರೆ ಯಾವುದೇ ಬದಲಾವಣೆಗಳು ಇಲ್ಲದೆ ಹಳೆಯ ನೋಟುಗಳಿಗೆ ಅನ್ವಯಿಸುವ ನಿಯಮಗಳು ಹೊಸ ನೋಟುಗಳಿಗೂ ಅನ್ವಯಿಸಲಿವೆ.
0 Comments