ಬಾಂಬ್ ನಿಷ್ಕ್ರಿಯಕ್ಕೆ ಆವಿಷ್ಕಾರಗೊಂಡ “ಪ್ರಬಲ್ ರೋಬೋಟ್”


ಹೊಸದಾಗಿ ರೋಬೋಟ್ ಒಂದನ್ನು ಆವಿಷ್ಕರಿಸಲಾಗಿದ್ದು ಈ ರೋಬೋಟ್ ಒಂದು ಕಿಲೋಮೀಟರ್ ದೂರದಿಂದ ತನ್ನ ಕಾರ್ಯವನ್ನು ನಿರ್ವಹಿಸುತ್ತಾ ಬಂದು ಬಾಂಬ್ ಸೇರಿದಂತೆ ನಾನಾ ಬಗೆಯ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಹೌದು.. ಇದು ಯೋಧರು, ತಂತ್ರಜ್ಞರಿಗೆ ಸ್ನೇಹಿತನಂತೆ ಕೆಲಸ ಮಾಡುವ ವೈಶಿಷ್ಟ್ಯತೆ ಹೊಂದಿದ್ದು ನಿರ್ದಿಷ್ಟ ವಯರ್ ತುಂಡರಿಸುವುದು, ರಿಯಲ್ ಟೈಮ್ ಡೇಟಾವನ್ನು ವರ್ಗಾಯಿಸುವುದು ಸೇರಿ ಹಲವು ಬಗೆಯ ಉಪಯುಕ್ತ ಕೆಲಸಗಳನ್ನು ನಿರ್ವಹಿಸುತ್ತದೆ.

ಈ ವಿಶೇಷವಾದ “ಪ್ರಬಲ್ ರೋಬೋಟ್” ಅನ್ನು ನೇತ್ರಾ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ರೂಪಿಸಿದೆ. ಇದು ಮನುಷ್ಯರಂತೆ ಸ್ಪೋಟಕ ಹಾಗೂ ಅದರ ಸ್ವರೂಪ ಯಾವುದೆಂದು ಗಮನಿಸಿ ಅಗತ್ಯ ಇದ್ದಲ್ಲಿ ಬಾಂಬನ್ನು ನಿಷ್ಕ್ರೀಯಗೊಳಿಸುತ್ತದೆ. ಬಾಂಬ್ ನಿಷ್ಕ್ರಿಯತೆ ಸಂದರ್ಭದಲ್ಲಿ ಬಾಂಬ್ ನ ಕೆಮಿಕಲ್ ಸೋರಿಕೆ, ಸ್ಫೋಟ ಸಂಭವಿಸುವ ಸಾಧ್ಯತೆಗಳು ಹೇರಳವಾಗಿರುತ್ತದೆ. ಇದರಿಂದ ಅತೀ ಹೆಚ್ಚು ಸಾವು-ನೋವು ಸಂಭವಿಸುವುದಲ್ಲದೆ, ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವ ಯೋಧರು, ಅಧಿಕಾರಿಗಳು ತಮ್ಮ ಕೈ ಕಾಲುಗಳನ್ನು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ತಡೆಯಲು ‘ಪ್ರಬಲ್ ರೋಬೋಟ್’ ನೆರವಾಗುತ್ತದೆ.

ಯಾವುದೇ ಸ್ಥಳದಲ್ಲಿ ಈ ರೊಬೊಟ್ ಅನ್ನು ನಿಲ್ಲಿಸಿ 1 ಕೀ.ಮೀ ದೂರದಿಂದ ವಿ.ಆರ್ ಸೆಟ್ಗಳನ್ನು ಅಳವಡಿಸಿಕೊಂಡು ಇದರ ಕೈಗಳನ್ನು ಮನುಷ್ಯರಂತೆ ನಿಯಂತ್ರಿಸಬಹುದಾಗಿದೆ. ಈಗಾಗಲೇ ಈ ರೊಬೋಟ್ ತನ್ನ ಆಂತರಿಕ ಪರೀಕ್ಷೆಯನ್ನು ಮುಗಿಸಿದ್ದು, ಸೈನ್ಯ ಸೇರಿದಂತೆ ಹಲವು ಗ್ರಾಹಕರು ಖರೀದಿಗೆ ಮುಂದೆ ಬಂದಿದ್ದಾರೆ ಎಂದು ನೇತ್ರಾ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಪ್ರತಿನಿಧಿ ಕಾರ್ತಿಕ್ ತಿಳಿಸಿದ್ದಾರೆ.

Post a Comment

0 Comments