"ಐ.ಬಿ.ಆರ್ ಅಚೀವರ್” ಸಾಧನೆಗೈದ 2 ವರ್ಷದ ವಿಹಾನ್


ಎರಡು ವರ್ಷ ಎರಡು ತಿಂಗಳ ಪುಟ್ಟ ಬಾಲಕನೊಬ್ಬ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಅಚೀವರ್ (IBR Achiever) ಆಗಿ ಪುಟ್ಟ ವಯಸ್ಸಿನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನಡ,  ಕೂಡೇಲು ನಿವಾಸಿ ಪೂರ್ಣೇಶ್-ವಿಲಾಕ್ಷಿತ ದಂಪತಿಯ ಮಗನಾಗಿರುವ ವಿಹಾನ್ ಕೆ.ಪಿ (ಜನನ:14/10/2024) ಈ ಸಾಧಕ. 

ಈ ಪುಟ್ಟ ಬಾಲಕನು ಸಣ್ಣ ವಯಸ್ಸಿನಲ್ಲಿ 6 ಚೆಸ್ ಕಾಯಿನ್, 5 ರಾಷ್ಟ್ರೀಯ ಚಿಹ್ನೆಗಳು, 20 ವಿವಿಧ ವಸ್ತುಗಳು, ಮಾನವ ಶರೀರದ 20 ಅಂಗಗಳು, 6 ಪ್ರಾಣಿಗಳು, 8 ವಾಹನಗಳು, 7 ಹಣ್ಣುಗಳು, 2 ತರಕಾರಿಗಳನ್ನು ಗುರುತಿಸಿದ್ದು ಅಲ್ಲದೆ 9 ಚಟುವಟಿಕೆಗಳಲ್ಲಿ ಭಾಗವಹಿಸಿ ಐ.ಬಿ.ಆರ್ ಅಚೀವರ್ ಎಂದು ಗುರುತಿಸಿಕೊಂಡಿದ್ದಾನೆ.

Post a Comment

1 Comments