ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ಐ ಹಮ್ಮಿಕೊಂಡಿರುವ ಗ್ರೀನ್ ಒಲಿಂಪಿಯಾಡ್ ಫಾರ್ ಯೂಥ್ ಈ ಕಾರ್ಯಕ್ರಮ ಎರಡನೇ ಆವೃತ್ತಿಯಾಗಿದೆ. ಮೊದಲ ಬಾರಿಗೆ 2024ರಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಉನ್ನತ ಶಿಕ್ಷಣದಲ್ಲಿ ಪರಿಸರ ಜಾಗೃತಿಯನ್ನು ಸಮನ್ವಯಗೊಳಿಸುತ್ತದೆ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ.
ಗ್ರೀನ್ ಒಲಿಂಪಿಯಾಡ್ ಎಂದರೇನು?
ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುವ ವಾರ್ಷಿಕ ಆನ್ಲೈನ್ ಪರೀಕ್ಷೆ ಇದಾಗಿದೆ. ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಉತ್ತರಿಸಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ವಿದ್ಯಾರ್ಥಿಗಳ ಪರಿಸರ ಪ್ರಜ್ಞೆ, ವ್ಯಕ್ತಿತ್ವ, ತಾರ್ಕಿಕ ಶಕ್ತಿಯ ಮೌಲ್ಯಮಾಪನಕ್ಕಾಗಿ ಈ ಗ್ರೀನ್ ಒಲಿಂಪಿಯಾಡ್ ಪರೀಕ್ಷೆಯನ್ನು ರೂಪಿಸಲಾಗಿದೆ. ಭಾರತದಾದ್ಯಂತ 18 ರಿಂದ 30 ವರ್ಷ ವಯೋಮಾನದ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವ ಎಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಯುಜಿಸಿ, ಕೇಂದ್ರ ಪರಿಸರ ಸಚಿವಾಲಯ, ಶಿಕ್ಷಣ ಸಚಿವಾಲಯಗಳು ಇದಕ್ಕೆ ಸಹಭಾಗಿತ್ವ ನೀಡಿವೆ.
ಪರೀಕ್ಷೆ ಹೇಗಿರುತ್ತದೆ?
ಗ್ರೀನ್ ಒಲಂಪಿಯಾಡ್ ಪರೀಕ್ಷೆಯು ಸಂಪೂರ್ಣ ಆನ್ಲೈನ್ ಪರೀಕ್ಷೆಯಾಗಿರುತ್ತದೆ. ವಿದ್ಯಾರ್ಥಿಗಳಿಗೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಉತ್ತರಿಸಲು ಅವಕಾಶವಿದೆ. ಈ ಪರೀಕ್ಷೆಯು ಸಂಪೂರ್ಣ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಹೊಂದಿದ್ದು, ಯಾವುದೇ ರೀತಿಯ ಋಣಾತ್ಮಕ ಅಂಕಗಳು ಇರುವುದಿಲ್ಲ. ಪರೀಕ್ಷೆಯ ಅವಧಿಯು 60 ನಿಮಿಷಗಳಾಗಿದ್ದು, ಒಟ್ಟು 50 ಪ್ರಶ್ನೆಗಳಿಗೆ ಉತ್ತರಿಸಬೇಕು.
ವಿದ್ಯಾರ್ಥಿಗಳಿಗೇನು ಲಾಭ?
1.ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಇ-ಪ್ರಮಾಣ ಪತ್ರ ನೀಡಲಾಗುತ್ತದೆ.
2. ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮೆರಿಟ್ ಡಿಸ್ಟಿಂಕ್ಷನ್ ಪ್ರಮಾಣ ಪತ್ರ ನೀಡಲಾಗುತ್ತದೆ.
3. ಮೊದಲ ಮೂರು ಸನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು.
4. ಟಿ.ಇ.ಆರ್.ಐ ಸಂಸ್ಥೆಯ ಯೂಥ್ ನೆಟ್ವರ್ಕ್ ನಲ್ಲಿ ಸದಸ್ಯತ್ವವು ಸಿಗಲಿದೆ.
5. ಟಿ.ಇ.ಆರ್.ಐ. ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮಾಡುವ ಅವಕಾಶವೂ ಸಿಗಲಿದೆ.
6. ಗ್ರೀನ್ ಒಲಂಪಿಯಾಡ ಪರೀಕ್ಷೆ ಬರೆಯುವುದರಿಂದ ಪರಿಸರ ಸಂಬಂಧಿ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ತಜ್ಞತೆ, ವ್ಯಕ್ತಿತ್ವ ಸುಧಾರಣೆ ಆಗಲಿದೆ.
7. ತಾರ್ಕಿಕ ಚಿಂತನೆ, ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹಾಗೂ ಯುವ ಪೀಳಿಗೆಯಲ್ಲಿ ಸುಸ್ಥಿರ ವಿಧಾನಗಳನ್ನು ಅಳವಡಿಸಲು ಕ್ರಿಯಾತ್ಮಕ ವ್ಯಕ್ತಿತ್ವ ವೃದ್ಧಿಯಾಗುತ್ತದೆ.
ಈ ಪರೀಕ್ಷೆಗೆ ನೋಂದಣಿ ಕಾರ್ಯವು ಮಾರ್ಚ್ 10 25ಕ್ಕೆ ಅಂತಿಮವಾಗಿದ್ದು ಪರೀಕ್ಷೆಯ ದಿನಾಂಕವನ್ನು ಏಪ್ರಿಲ್ ಏಳರಿಂದ ಹನ್ನೊಂದರ ವರೆಗೆ ನಿಗದಿಪಡಿಸಲಾಗಿದೆ
0 Comments