ದೇಶದ ಮೊದಲ "ಹೈಪರ್ ಲೂಪ್ ಟ್ರ್ಯಾಕ್" ಚೆನ್ನೈನಲ್ಲಿ ಅನಾವರಣ

ಎಲ್ಲಾ ಕ್ಷೇತ್ರಗಳಲ್ಲೂ ಹೊಸ ಹೊಸ ಆವಿಷ್ಕಾರಗಳು, ನವನವೀನ ಆಧುನಿಕ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಲೇ ಇವೆ. ಹಾಗೆಯೇ ಸಾರಿಗೆ ವ್ಯವಸ್ಥೆಯಲ್ಲಿ ವೇಗವನ್ನು ಬಲಪಡಿಸಲು ಚೆನ್ನೈನಲ್ಲಿ ಕಳೆದ ವರ್ಷವೇ ದೇಶದ ಮೊದಲ ಹೈಪರ್ ಲೂಪ್ ಪರೀಕ್ಷಾ ಟ್ರ್ಯಾಕ್ ಅನ್ನು ಸಿದ್ಧಪಡಿಸಲಾಗಿತ್ತು. ಈ ಟ್ರ್ಯಾಕ್ ಅನ್ನು ಮಂಗಳವಾರ ಅನಾವರಣ ಮಾಡಲಾಗಿದೆ. 
ದೇಶದ ಮೊದಲ ಹೈಪರ್ ಲೂಪ್ ಟ್ರ್ಯಾಕ್ ಎನಿಸಿಕೊಂಡಿರುವ ಈ ಟ್ರ್ಯಾಕ್ ನಲ್ಲಿ ರೈಲು ಗಂಟೆಗೆ ಗರಿಷ್ಠ 1200 ಕಿಲೋಮೀಟರ್ ವೇಗದಲ್ಲಿ ಸಾಗಬಹುದಾಗಿದೆ. ಇದು ಯಶಸ್ವಿಯಾದರೆ, ಉದಾಹರಣೆಗೆ ದಿಲ್ಲಿಯಿಂದ ಜೈಪುರ ನಡುವಿನ 300 ಕಿಲೋ ಮೀಟರ್ ಮಾರ್ಗವನ್ನು 30 ನಿಮಿಷದಲ್ಲಿ ತಲುಪಬಹುದಾದ ಅತ್ಯಾಧುನಿಕ ವ್ಯವಸ್ಥೆಯುಳ್ಳ ತಂತ್ರಜ್ಞಾನ ಇದಾಗಿದೆ. ಐಐಟಿ ಮದ್ರಾಸ್ ನ ಸಹಾಯದಿಂದ ರೈಲ್ವೆ ಇಲಾಖೆ 422 ಮೀಟರ್ ಉದ್ದದ ಹೈಪರ್ ಲೂಪ್ ಮಾರ್ಗವನ್ನು ಅಭಿವೃದ್ಧಿಪಡಿಸಿದೆ. ಇದು ಸಂಚಾರಕ್ಕೆ ಇನ್ನಷ್ಟು ವೇಗ ನೀಡಲಿದೆ.

ಹೈಪರ್ ಲೂಪ್ ಎಂದರೆ ರೈಲು ಚಲಿಸುವ ಸುರಂಗದ ರೀತಿಯ ಪೈಪ್ನಲ್ಲಿನ ಮಾರ್ಗ. ಐದನೇ ಸಾರಿಗೆ ವಿಧಾನ ಎಂದು ಕರೆಯಲ್ಪಡುವ ಹೈಪರ್ ಲೂಪ್ ದೂರ ಪ್ರಯಾಣಕ್ಕಾಗಿ ಒಂದು ಹೈಸ್ಪೇಟ್ ಸಾರಿಗೆ ವ್ಯವಸ್ಥೆಯಾಗಿದೆ. ಇದು ರೈಲುಗಳ ನಿರ್ವಾತ ಕೊಳವೆಗಳಲ್ಲಿ ವಿಶೇಷ ಕ್ಯಾಪ್ಸುಲ್ ಗಳ ಮೂಲಕ ಅತಿ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಚಲಿಸಬಹುದು. ಕಡಿಮೆ ವಿದ್ಯುತ್ ಬಳಕೆ ಮತ್ತು 24 ಗಂಟೆಯೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.


Post a Comment

0 Comments